ಅಸ್ಸಾಂಜೆ ವಿರುದ್ಧ ಲೈಂಗಿಕ ಕಿರುಕಳ ಆರೋಪ ತನಿಖೆಯನ್ನು ಕೈಬಿಟ್ಟ ಸ್ವೀಡನ್

ವಿಕಿಲೀಕ್ಸ್ ಸಂಸ್ಥಾಪಕ, ಸದ್ಯಕ್ಕೆ ರಷ್ಯಾದಲ್ಲಿ ರಾಜಕೀಯ ಆಶ್ರಯ ಪಡೆದಿರುವ ಜೂಲಿಯನ್ ಅಸ್ಸಾಂಜೆ ವಿರುದ್ಧ ಇರುವ ಲೈಂಗಿಕ ಕಿರುಕುಳ ಆರೋಪದ ತನಿಖೆಯನ್ನು
ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ
ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ

ಲಂಡನ್: ವಿಕಿಲೀಕ್ಸ್ ಸಂಸ್ಥಾಪಕ, ಸದ್ಯಕ್ಕೆ ರಷ್ಯಾದಲ್ಲಿ ರಾಜಕೀಯ ಆಶ್ರಯ ಪಡೆದಿರುವ ಜೂಲಿಯನ್ ಅಸ್ಸಾಂಜೆ ವಿರುದ್ಧ ಇರುವ ಲೈಂಗಿಕ ಕಿರುಕುಳ ಆರೋಪದ ತನಿಖೆಯನ್ನು ಕೈಬಿಡಲು ಸ್ವೀಡನ್ ನಿರ್ಧರಿಸಿದೆ.

ಬಿಬಿಸಿ ಪ್ರಕಾರ, ವಿಕಿಲೀಕ್ಸ್ ಸಂಸ್ಥಾಪಕನನ್ನು ಪ್ರಶ್ನಿಸಲು ತನಿಖಾಧಿಕಾರಿಗಳಿಗೆ ಸಾಧ್ಯವಾಗಿಲ್ಲದೆ ಹೋಗಿರುವುದರಿಂದ, ಈಗ ಲೈಂಗಿಕ ಕಿರುಕುಳದ ಆರೋಪದ ವಿರುದ್ಧ ತನಿಖೆ ನಡೆಸಲು ಸಮಯ ಕಳೆದುಹೋಗಿದೆ ಎನ್ನಲಾಗಿದೆ.

ತನ್ನ ವಿರುದ್ಧ ಇರುವ ಅಲ್ಲ ಆರೋಪಗಳನ್ನು ಅಲ್ಲಗೆಳೆದಿರುವ ಅಸ್ಸಾಂಜೆ ಇದು ಚಾರಿತ್ರ್ಯ ಹರಣಕ್ಕಾಗಿ ಮಾಡಿರುವ ಸುಳ್ಳು ಪ್ರಚಾರ ಎಂದಿದ್ದಾರೆ.

ಆಸ್ಟ್ರೇಲಿಯಾದ ಈ ಪತ್ರಕರ್ತ ಮತ್ತು ಕಾರ್ಯಕರ್ತ ೨೦೧೨ರಲ್ಲಿ ಸ್ವೀಡನ್ ಬಂಧಿಸುವ ಬೆದರಿಕೆಯಿಂದ ಲಂಡನಿನ ಈಕ್ವೆಡಾರ್ ರಾಯಭಾರಿ ಕಚೇರಿಯಲ್ಲಿ ರಾಜಕೀಯ ಆಶ್ರಯ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com