ಜೀನ್ಸ್ ಧರಿಸಿದ್ದಕ್ಕೆ ಛಡಿಯೇಟು!

ಸುಡಾನ್‍ನ ನ್ಯಾಯಾಲಯವೊಂದು 19 ವರ್ಷದವಿದ್ಯಾರ್ಥಿನಿಗೆ 20 ಛಡಿಯೇಟು ಮತ್ತು ರು. 5 ಸಾವಿರ ದಂಡ ವಿಧಿಸಿದೆ. ಆಕೆ ಕಳ್ಳಿಯಲ್ಲ, ರ್ಯಾಗಿಂಗ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಖಾರ್ತೂಮ್ : ಸುಡಾನ್‍ನ ನ್ಯಾಯಾಲಯವೊಂದು 19 ವರ್ಷದವಿದ್ಯಾರ್ಥಿನಿಗೆ 20 ಛಡಿಯೇಟು ಮತ್ತು ರು. 5 ಸಾವಿರ ದಂಡ ವಿಧಿಸಿದೆ. ಆಕೆ ಕಳ್ಳಿಯಲ್ಲ, ರ್ಯಾಗಿಂಗ್ ಮಾಡಿಲ್ಲ, ದೌರ್ಜನ್ಯ ಎಸಗಿಲ್ಲ... ಹಾಗಾದರೆ ಆಕೆ ಮಾಡಿದ ತಪ್ಪಾದರೂ ಏನು ಎಂದು ಯೋಚಿಸುತ್ತಿದ್ದೀರಾ? ಜೀನ್ಸ್ ಪ್ಯಾಂಟ್ ಧರಿಸಿದ್ದು! ಜೀನ್ಸ್ ಮತ್ತು ಉದ್ದನೆಯ ಶರ್ಟ್ ಧರಿಸಿದ್ದಕ್ಕಾಗಿ ಸ್ವತಃ ನ್ಯಾಯಾಲಯವೇ ಆಕೆಯನ್ನು ಅಪರಾಧಿ ಎಂದು ಘೋಷಿಸಿ ಈ ಶಿಕ್ಷೆ ನೀಡಿದೆ. ಈ ಘಟನೆಯುಈಗ ವಿಶ್ವಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದೆ. ಬ್ರಿಟನ್‍ನ ಹಕ್ಕುಗಳ ಸಂಸ್ಥೆಯಾದ ಆಮ್ನೆಸ್ಟಿ ಇಂಟರ್‍ನ್ಯಾಷನಲ್ ಈ ಘಟನೆಯನ್ನು ಖಂಡಿಸಿ ಆನ್‍ಲೈನ್ ಅಭಿಯಾನವನ್ನೇ ಆರಂಭಿಸಿದೆ.
10 ಯುವತಿಯರ ಬಂಧನ: ಜೀನ್ಸ್ ಧರಿಸಿದ್ದಕ್ಕಾಗಿ ಜೂ. 25ರಂದು ಸುಡಾನ್ ಪೊಲೀಸರು ಖಾರ್ತೂಮ್ ನ ಚರ್ಚ್ ಹೊರಗೆ 10 ಮಂದಿ ವಿದ್ಯಾರ್ಥಿನಿಯರನ್ನು ಬಂಧಿಸಿದ್ದರು. ಬಂಧಿತರಲ್ಲಿ 19ರ ಹರೆಯದ ಕ್ರಿಶ್ಚಿಯನ್ ವಿದ್ಯಾರ್ಥಿನಿ ಫರ್ದೋಸ್ ಅಲ್-ತೋಮಮ್  ಕೂಡ ಒಬ್ಬಳು. ಈಗ ಶಿಕ್ಷೆಗೆ ಗುರಿಯಾದವಳೂ ಇದೇ ವಿದ್ಯಾರ್ಥಿನಿ.

8 ಮಂದಿಗೆ ದಂಡ ವಿಧಿಸಿ ಬಿಡುಗಡೆ ಮಾಡಲಾಗಿದೆ. ಒಬ್ಬಾಕೆಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.ಸುಡಾನ್ ಕಾನೂನಿನ ಪ್ರಕಾರ, ಅಸಭ್ಯ ಅಥವಾ ಅನೈತಿಕ ವಸ್ತ್ರ ಧರಿಸುವುದು ನಿಷಿದ್ಧವಾಗಿದ್ದು, ಓದನ್ನು ಉಲ್ಲಂಘಿಸಿದವರಿಗೆ 40 ಛಡಿಯೇಟು ಮತ್ತು ದಂಡವಿಧಿಸಲಾಗುತ್ತದೆ.ತೋಮ್  ಪ್ರಕರಣ ಸಂಬಂಧ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದಾಗಲೂ, ಆಕೆ ಶಿಸ್ತು ಬದ್ದ ಉಡುಪು ಧರಿಸಿಲ್ಲ ಎಂದು ಆರೋಪಿಸಿದ ನ್ಯಾಯಾಧೀಶರು, ತೋಮ್ ಗೆ ಹೆಚ್ಚುವರಿ ದಂಡಮಾತ್ರವಲ್ಲದೇ, 20 ಛಡಿಯೇಟು ಕೂಡ ನೀಡುವಂತೆಆದೇಶಿಸಿದ್ದಾರೆ. ಇದನ್ನು ಪ್ರಶ್ನಿಸಿ ತೋಮ್ ಪರವಕೀಲರು ಮೇಲ್ಮನವಿ ಸಲ್ಲಿಸಿದ್ದಾರಾದರೂ, ಕೋರ್ಟ್ ಇನ್ನೂ ಆ ಅರ್ಜಿಯನ್ನೇ ಕೈಗೆತ್ತಿಕೊಂಡಿಲ್ಲ.
ಬ್ರಿಟನ್‍ನಲ್ಲಿ ಅಭಿಯಾನ: ವಿದ್ಯಾರ್ಥಿನಿಗೆ ಇಂತಹ ಶಿಕ್ಷೆ ವಿಧಿಸಿದ ಸುಡಾನ್ ನ್ಯಾಯಾಲಯದ ಕ್ರಮಕ್ಕೆವಿಶ್ವಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಮಾನವಹಕ್ಕುಗಳ ಸಂಸ್ಥೆಯಾದ ಆ್ಯಮ್ನೆಸ್ಟಿ ಇಂಟರ್‍ನ್ಯಾಷನಲ್ ಬ್ರಿಟನ್‍ನಾದ್ಯಂತ ಆನ್‍ಲೈನ್ ಅಭಿಯಾನವನ್ನೂ ಕೈಗೊಂಡಿದೆ. ಅಲ್-ತೋಮ್ ಗೆ ಬೆಂಬಲ ವ್ಯಕ್ತಪಡಿಸಿ ಸುಡಾನ್ ಸರ್ಕಾರಕ್ಕೆ ಪತ್ರ ಬರೆಯುತ್ತಿರುವುದಾಗಿಯೂ, ಅದಕ್ಕೆ ಬೆಂಬಲವ್ಯಕ್ತಪಡಿಸುವಂತೆಯೂ ಕೇಳಿಕೊಂಡಿದೆ. ಈ ಅಭಿಯಾನಕ್ಕೆ 40 ಸಾವಿರ ಮಂದಿ ಈಗಾಗಲೇ ತಮ್ಮ ಬೆಂಬಲ ಸೂಚಿಸಿದ್ದಾರೆ. ಇಂತಹ ಚಿತ್ರಹಿಂಸೆಯಶಿಕ್ಷೆಯನ್ನು ನ್ಯಾಯಾಂಗ ವ್ಯವಸ್ಥೆಯಿಂದಲೇ ಕೈಬಿಡಬೇಕು ಎಂದೂ ಹಲವರು ಆಗ್ರಹಿಸಿದ್ದಾರೆ.

ಇದೇ ಮೊದಲಲ್ಲ: ಮುಸ್ಲಿಮರೇ ಬಹುಸಂಖ್ಯಾತರಿರುವಸುಡಾನ್‍ನಲ್ಲಿ ಇಂತಹ ವಿವಾದ ಇದೇಮೊದಲೇನಲ್ಲ. ಕಳೆದ ವರ್ಷ, ಮರಿಯಂ ಯೆಹ್ಯಾ ಇಬ್ರಾಹಿಂ ಕ್ರಿಶ್ಚಿಯನ ಧರ್ಮದಿಂದ ಇಸ್ಲಾಂಗೆ ಮರುಮತಾಂತರಗೊಳ್ಳಲು ಒಪ್ಪದಿದ್ದಕ್ಕೆ ಆಕೆಗೆ ಜೈಲು ಶಿಕ್ಷೆ ವಿ„ಸಲಾಗಿತ್ತು. ನಂತರ ಅವಳನ್ನು ಬಿಡುಗಡೆಗೊಳಿಸಲಾಯಿತಾದರೂ, ಜೈಲಿನಲ್ಲಿ ಕೈಕಾಲುಗಳಿಗೆ ಸಂಕೋಲೆ ಧರಿಸಿರುವಂತೆಯೇ ಆಕೆ ಮಗುವಿಗೆ ಜನ್ಮ ನೀಡಿದ್ದಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com