ಇಂಡೊನೇಷ್ಯಾ ವಿಮಾನ ಪತನವಾದ ಸ್ಥಳದಲ್ಲಿ 54 ಮೃತ ದೇಹ ಪತ್ತೆ

ಇಂಡೊನೇಷ್ಯಾದ ಪಪುವಾ ಪ್ರಾಂತ್ಯದ ಪರ್ವತದಲ್ಲಿ ವಿಮಾನ ಪತನಗೊಂಡ ಸ್ಥಳದಲ್ಲಿ ಮಂಗಳವಾರ 54 ಮೃತ ದೇಹಗಳು ಪತ್ತೆಯಾಗಿದ್ದು, ವಿಮಾನದಲ್ಲಿದ್ದ...
ಮೃತ ಪ್ರಯಾಣಿಕರ ಸಂಬಂಧಿಗಳಿಂದ ಮಾಹಿತಿ ಪಡೆಯುತ್ತಿರುವ ರಕ್ಷಣಾ ಸಿಬ್ಬಂದಿ
ಮೃತ ಪ್ರಯಾಣಿಕರ ಸಂಬಂಧಿಗಳಿಂದ ಮಾಹಿತಿ ಪಡೆಯುತ್ತಿರುವ ರಕ್ಷಣಾ ಸಿಬ್ಬಂದಿ
Updated on

ಜಯಪುರ: ಇಂಡೊನೇಷ್ಯಾದ ಪಪುವಾ ಪ್ರಾಂತ್ಯದ ಪರ್ವತದಲ್ಲಿ ವಿಮಾನ ಪತನಗೊಂಡ ಸ್ಥಳದಲ್ಲಿ ಮಂಗಳವಾರ 54 ಮೃತ ದೇಹಗಳು ಪತ್ತೆಯಾಗಿದ್ದು, ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ವಿಮಾನದಲ್ಲಿದ್ದ ಯಾರೊಬ್ಬರು ಬದುಕುಳಿದಿಲ್ಲ. ಎಲ್ಲಾ 54 ಮಂದಿಯ ಮೃತದೇಹಗಳು ಪತ್ತೆಯಾಗಿವೆ' ಎಂದು ಇಂಡೊನೇಷ್ಯಾ ಸಾರಿಗೆ ಸಚಿವಾಲಯದ ವಕ್ತಾರ ಜೆ.ಎ. ಭರತ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ಭಾನುವಾರ ಪಪುವಾ ಪ್ರಾಂತ್ಯದ ಪೂರ್ವ ಭಾಗದಿಂದ ವಾಯು ಸಂಚಾರ ನಿಯಂತ್ರಣ ಕೇಂದ್ರದ ಸಂಪರ್ಕ ಕಡಿದುಕೊಂಡಿದ್ದ ಇಂಡೊನೇಷ್ಯಾ ವಿಮಾನ ಟ್ಯಾಂಗಾಂಕ್ ಪರ್ವತದಲ್ಲಿ ಪತನವಾಗಿತ್ತು. ದುರಂತದಲ್ಲಿ ಐವರು ಮಕ್ಕಳು ಸೇರಿದಂತೆ 49 ಪ್ರಯಾಣಿಕರು ಹಾಗೂ ಐವರು ವಿಮಾನ ಸಿಬ್ಬಂದಿ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com