ಶ್ರೀಲಂಕಾ ಸಂಸತ್ತು ಚುನಾವಣೆ:ಯುಎನ್ ಪಿ, ಯುಪಿಎಫ್ಎ ನಡುವೆ ಹಣಾಹಣಿ

ಶ್ರೀಲಂಕಾದ ಸಂಯುಕ್ತ ಸ್ವಾತಂತ್ರ್ಯ ಮೈತ್ರಿಕೂಟ(ಯುಎನ್ ಪಿ) ಮತ್ತು ಸಂಯುಕ್ತ ರಾಷ್ಟ್ರೀಯ ಪಕ್ಷಗಳ(ಯುಪಿಎಫ್ಎ) ನಡುವೆ ನೇರ ಹಣಾಹಣಿ ನಡೆಯುತ್ತಿದ್ದು...
ಮಹಿಂದಾ ರಾಜಪಕ್ಸೆ
ಮಹಿಂದಾ ರಾಜಪಕ್ಸೆ

ಕೊಲಂಬೋ: ಶ್ರೀಲಂಕಾದ ಸಂಯುಕ್ತ ಸ್ವಾತಂತ್ರ್ಯ ಮೈತ್ರಿಕೂಟ(ಯುಎನ್ ಪಿ) ಮತ್ತು ಸಂಯುಕ್ತ ರಾಷ್ಟ್ರೀಯ ಪಕ್ಷಗಳ(ಯುಪಿಎಫ್ಎ) ನಡುವೆ ನೇರ ಹಣಾಹಣಿ ನಡೆಯುತ್ತಿದ್ದು, ಹಲವು ರಾಜ್ಯಗಳಲ್ಲಿ ಫಲಿತಾಂಶ ಹೊರಬಿದ್ದಿದೆ.

ಮತ ಹಂಚಿಕೆಯ ಶೇಕಡಾವಾರಿನಲ್ಲಿ  ಯುಎನ್ ಪಿ ಯುಪಿಎಫ್ ಎಗಿಂತ ಮುಂದಿದೆ.
ಇಂದು ಬೆಳಗ್ಗೆ ಬಂದ ವರದಿ ಪ್ರಕಾರ, ಮಾಜಿ ಅಧ್ಯಕ್ಷ ಹಾಗೂ ಪ್ರಧಾನಮಂತ್ರಿ ಸ್ಥಾನದ ಆಕಾಂಕ್ಷಿ ಮಹೀಂದ ರಾಜಪಕ್ಸೆ ತಮ್ಮ ಸೋಲನ್ನು ಒಪ್ಪಿಕೊಂಡಿದ್ದರು. ಆದರೆ ನಂತರ ಅವರ ಅಧಿಕೃತ ಟ್ವಿಟ್ಟರ್ ನಲ್ಲಿ ಸೋಲು, ಗೆಲುವನ್ನು ಒಪ್ಪಿಕೊಳ್ಳಲು ಚುನಾವಣೆಯ ಅಂತಿಮ ಫಲಿತಾಂಶ ಅಧಿಕೃತವಾಗಿ ಇನ್ನೂ ಹೊರಬಿದ್ದಿಲ್ಲ ಎಂಬುದಾಗಿ ಇದೆ.

ಈಗಾಗಲೇ 107 ಸ್ಥಾನಗಳ ಫಲಿತಾಂಶ ಹೊರಬಿದ್ದಿದ್ದು,ಸಂಯುಕ್ತ ರಾಷ್ಟ್ರೀಯ ಪಕ್ಷ 51 ಸ್ಥಾನಗಳನ್ನು ಮತ್ತು  ಯುಎನ್ ಪಿ 41 ಸ್ಥಾನಗಳನ್ನು ಪಡೆದುಕೊಂಡಿದೆ.ಇತರ ಪಕ್ಷಗಳಾದ ತಮಿಳು ರಾಷ್ಟ್ರೀಯ ಮೈತ್ರಿಕೂಟ 10 ಸ್ಥಾನಗಳನ್ನು, ಜನತಾ ವಿಮುಕ್ತಿ ಪೆರಮುನ 2 ಸೀಟುಗಳನ್ನು, ಎಲಮ್ ಪೀಪಲ್ಸ್ ಪ್ರಜಾಸತ್ತಾತ್ಮಕ ಪಕ್ಷ ಒಂದು ಸ್ಥಾನಗಳನ್ನು ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com