ಸಿರಿಯಾದ ಖ್ಯಾತ ಪ್ರಾಕ್ತನ ಶಾಸ್ತ್ರಜ್ಞನ ಹತ್ಯೆ

ಇಸ್ಲಾಮಿಕ್ ಸ್ಟೇಟ್(ಐಎಸ್‍ಐಎಸ್) ಉಗ್ರರು ಸಿರಿಯಾದ ಐತಿಹಾಸಿಕ ಪಟ್ಟಣ ಪಲ್ ಮೈರಾದ ಖ್ಯಾತ ಹಾಗೂ ಹಿರಿಯ ಪ್ರಾಕ್ತನ ಶಾಸ್ತ್ರಜ್ಞ ಖಾಲಿದ್ ಅಲ್ ಅಸ್ಸಾದ್(81)ರನ್ನು ಹತ್ಯೆ ಮಾಡಿ, ಊರ ಮಧ್ಯೆ ಅವರ ಶವ ನೇತುಹಾಕಿದ್ದಾರೆ...
ಸಿರಿಯಾದ ಐತಿಹಾಸಿಕ ಪಟ್ಟಣ ಪಲ್ ಮೈರಾದ ಖ್ಯಾತ ಹಾಗೂ ಹಿರಿಯ ಪ್ರಾಕ್ತನ ಶಾಸ್ತ್ರಜ್ಞ ಖಾಲಿದ್ ಅಲ್ ಅಸ್ಸಾದ್ (ಸಂಗ್ರಹ ಚಿತ್ರ)
ಸಿರಿಯಾದ ಐತಿಹಾಸಿಕ ಪಟ್ಟಣ ಪಲ್ ಮೈರಾದ ಖ್ಯಾತ ಹಾಗೂ ಹಿರಿಯ ಪ್ರಾಕ್ತನ ಶಾಸ್ತ್ರಜ್ಞ ಖಾಲಿದ್ ಅಲ್ ಅಸ್ಸಾದ್ (ಸಂಗ್ರಹ ಚಿತ್ರ)

ಬೈರೂತ್: ಇಸ್ಲಾಮಿಕ್ ಸ್ಟೇಟ್(ಐಎಸ್‍ಐಎಸ್) ಉಗ್ರರು ಸಿರಿಯಾದ ಐತಿಹಾಸಿಕ ಪಟ್ಟಣ ಪಲ್ ಮೈರಾದ ಖ್ಯಾತ ಹಾಗೂ ಹಿರಿಯ ಪ್ರಾಕ್ತನ ಶಾಸ್ತ್ರಜ್ಞ ಖಾಲಿದ್ ಅಲ್ ಅಸ್ಸಾದ್(81)ರನ್ನು ಹತ್ಯೆ ಮಾಡಿ, ಊರ ಮಧ್ಯೆ ಅವರ ಶವ ನೇತುಹಾಕಿದ್ದಾರೆ.

ಐಎಸ್‍ಐಎಸ್ ಉಗ್ರರು ಮೇ ತಿಂಗಳಲ್ಲಿ ಪಲ್‍ಮೈರಾ ಪಟ್ಟಣವನ್ನು ವಶಕ್ಕೆ ತೆಗೆದು ಕೊಂಡಿದ್ದರು. ಆ ಬಳಿಕ 2 ಸಾವಿರ ವರ್ಷ ಗಳಷ್ಟು ಹಳೆಯ ರೋಮನ್ ಸಾಮ್ರಾಜ್ಯ ಕಾಲದ ಸ್ಮಾರಕ ಗಳನ್ನು ನಾಶಪಡಿಸಿದ್ದರು.

ಇದು ಮಧ್ಯ ಏಷ್ಯಾದ ಆಕರ್ಷಣೆಯ ಕೇಂದ್ರವಾಗಿತ್ತು. ಈಗಾಗಲೇ ಉಗ್ರರು ಪಲ್‍ಮೈರಾದ ಐತಿಹಾಸಿಕ ಮ್ಯೂಸಿಯಂಗೆ ಹಾನಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com