
ಲಂಡನ್: ವಿವಾಹಬಾಹಿರ ಸಂಬಂಧಕ್ಕಾಗಿ ಹಂಬಲಿಸುವವರಿಗೆ ಸಂಗಾತಿಯನ್ನು ಪರಿಚಯಿಸುವ ಆನ್‌ಲೈನ್ ಡೇಟಿಂಗ್ ವೆಬ್‌ಸೈಟ್ ಆ್ಯಷ್ಲೇ ಮ್ಯಾಡಿಸನ್ ಡಾಟ್ ಕಾಂ ಹ್ಯಾಕಿಂಗ್‌ಗೆ ಗುರಿಯಾಗಿದೆ. ಹ್ಯಾಕಿಂಗ್‌ನಿಂದಾಗಿ ಅಲ್ಲಿ ನೋಂದಣಿ ಮಾಡಿದ ಹಲವಾರು ವ್ಯಕ್ತಿಗಳ ಪ್ರೊಫೈಲ್‌ಗಳು ಬಹಿರಂಗವಾಗಿದ್ದು, ಬ್ರಿಟನ್ ಹ್ಯಾಕಿಂಗ್ ಹೊಡೆತಕ್ಕೆ ಬೆಚ್ಚಿ ಬಿದ್ದಿದೆ.
ಬಹಿರಂಗವಾದ ಪ್ರೊಫೈಲ್‌ಗಳಲ್ಲಿ ಬ್ರಿಟನ್‌ನ ಮಹಿಳಾ ಸಂಸದೆ, ವಿಜ್ಞಾನಿಗಳು ಸೇರಿದಂತೆ ಹಲವಾರು ಗಣ್ಯರ ಹೆಸರುಗಳಿವೆ.
ವಿವಾಹಬಾಹಿರ ಸಂಬಂಧಗಳನ್ನು ಬಯಸುವವರಿಗೆ ಡೇಟಿಂಗ್ ಸೈಟ್ ಆಗಿದೆ ಆ್ಯಷಲೇ ಮೆಡಿಸನ್. ಈ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿದ್ದ 3.7 ಕೋಟಿ ಜನರ ವಿವರಗಳು ಹ್ಯಾಕಿಂಗ್ ಮೂಲಕ ಬಹಿರಂಗಗೊಂಡಿದೆ.
ತಾವು ಈ ಸೈಟ್‌ನ್ನು ಹ್ಯಾಕ್ ಮಾಡಿ ಅಲ್ಲಿನ ವಿವರಗಳನ್ನು ಬಹಿರಂಗ ಪಡಿಸುತ್ತೇವೆ ಎಂದು ಹ್ಯಾಕರ್‌ಗಳು ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಇದೀಗ ಬಹಿರಂಗಗೊಂಡ ಪ್ರೊಫೈಲ್‌ಗಳಲ್ಲಿ 12 ಲಕ್ಷ ಮಂದಿ ಬ್ರಿಟನ್ ನಿವಾಸಿಗಳಾಗಿದ್ದಾರೆ. ಇಲ್ಲಿ ವ್ಯಕ್ತಿಗಳ ಹೆಸರು, ವಯಸ್ಸು, ಕೆಲಸ, ಇಮೇಲ್, ಕ್ರೆಡಿಟ್ ಕಾರ್ಡ್ ಮಾಹಿತಿ, ಫೋನ್ ನಂಬರ್, ಆಸಕ್ತಿ ಎಲ್ಲ ವಿಷಯಗಳೀಗ ಬಹಿರಂಗವಾಗಿವೆ.
ವಿಷಯ ಬಹಿರಂಗವಾಗುತ್ತಿದ್ದಂತೆ ಹಲವರ ಖಾಸಗಿ ಬದುಕುಗಳು ಅಲ್ಲೋಲಕಲ್ಲೋಲವಾಗಿದೆ. ಕೆಲವರು ವೆಬ್‌ಸೈಟ್‌ನಲ್ಲಿ ತಮ್ಮ ಸಂಗಾತಿಯ ಹೆಸರೂ ಅಲ್ಲಿದೆಯೇ? ಎಂದು ಪರಿಶೀಲಿಸುತ್ತಿದ್ದಾರೆ. ಈ ಹ್ಯಾಕಿಂಗ್ ಕೃತ್ಯದಿಂದಾಗಿ ಹಲವರ ಕುಟುಂಬ-ಸಂಬಂಧಗಳು ಮುರಿದು ಬೀಳಲಿವೆ ಮತ್ತು ಕೆಲವರ ಮುಖವಾಡ ಕಳಚಲಿದೆ ಎಂಬುದಂತೂ ಸತ್ಯ!
Advertisement