
ಅಥೆನ್ಸ್: ಗ್ರೀಸ್ ಪ್ರಧಾನಿ ಅಲೆಕ್ಸಿ ತ್ಸಿಪ್ರಸ್ ಅವರು ಗುರುವಾರ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದು ಅವಧಿಗೆ ಮುಂಚಿತವಾಗಿಯೇ ಚುನಾವಣೆ ನಡೆಯಲಿದೆ ಎಂದು ಸೂಚಿಸಿದ್ದಾರೆ. ಈ ವಿಷಯವನ್ನು ಅವರು ಟಿವಿ ವಾಹಿನಿಯಲ್ಲಿ ತಿಳಿಸಿದ್ದಾರೆ.
ಗ್ರೀಸ್ ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ 'ಬೇಲ್ ಔಟ್'ನ ಮೊದಲ ಭಾಗ ಈಗ ಬರುತ್ತಿದ್ದು, ಗ್ರೀಕ್ ಜನರು ತಮ್ಮ ತೀರ್ಪು ನೀಡುವುದಕ್ಕೆ ಅವಕಾಶ ನೀಡುವುದು ನನ್ನ ನೈತಿಕ ಹೊಣೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ಸರ್ಕಾರದ ಯೋಜನೆಗಳನ್ನು ಮುಂದುವರೆಸಲು ಗ್ರೀಕ್ ಜನರಲ್ಲಿ ಮತ್ತೆ ಮತಯಾಚನೆ ಮಾಡುವುದಾಗಿ ತಿಳಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಈ 'ಬೇಲ್ ಔಟ್' ಒಪ್ಪಂದ ಮಾಡಿಕೊಂಡದ್ದಕ್ಕಾಗಿ ಆಡಳಿತ ಎಡ ಪಕ್ಷದ ಸದಸ್ಯರಿಂದ ತ್ಸಿಪ್ರಸ್ ಅವರಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಯೂರೋಪಿಯನ್ ಸೆಂಟ್ರಲ್ ಬ್ಯಾಂಕಿನ ತನ್ನ ಸಾಲ ತೀರಿಸಲು ಮೊದಲ ಕಂತಿನ ೧೪.೫ ಬಿಲಿಯನ್ ಡಾಲರ್ ಗಳನ್ನು ಅಂತರಾಷ್ಟ್ರೀಯ ಬ್ಯಾಂಕುಗಳಿಂದ ಗ್ರೀಸ್ ಪಡೆದಿದೆ.
Advertisement