ಇಸ್ತಾನ್ಬುಲ್: ಸಿರಿಯಾ ಮತ್ತು ಇರಾಕ್ ನಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ತನ್ನ ಕರಾಳ ಮೂಖ ತೋರಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಯಾರೂ ಯೋಚಿಸದ ಹೊಸ ಆಯುಧದ ಆವಿಷ್ಕಾರಕ್ಕೆ ಚಿಂತಿಸುತ್ತಿದೆ.
ಇಸ್ಲಾಮಿಕ್ ಸ್ಟೇಟ್ ಮಾಡುವುದಾಗಿ ಹೇಳಿಕೊಂಡು ಸಿರಿಯಾ ಮತ್ತು ಇರಾಕ್ ನಲ್ಲಿ ಮಾನುಷ್ಯರ ಶಿರಚ್ಛೇಧ, ಬಾಂಬ್ ಸ್ಫೋಟ, ಗುಂಡಿನ ದಾಳಿ, ಆತ್ಮಾಹುತಿ ಬಾಂಬ್ ದಾಳಿ ಹೀಗೆ ನಾನಾ ಕೃತ್ಯಗಳ ಮೂಲಕ ನರಬಲಿಗೆ ಮುಂದಾಗಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಇದೀಗ ಹೊಸದೊಂದು ಆಯುಧ ಕಂಡು ಹಿಡಿದಿದೆ. ಅದು ಯಾವುದಂತಿರ 'ಏಡ್ಸ್ ಬಾಂಬ್'.
ಇಸಿಸ್ ಉಗ್ರ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರರ ಪೈಕಿ ಹೆಚ್ಐವಿ ಸೋಂಕು ಇರುವ 16 ಮಂದಿಯನ್ನು ಆತ್ಮಾಹುತಿ ಬಾಂಬ್ ದಾಳಿ ಮಾಡಿಕೊಳ್ಳುವ ಮೂಲಕ ಏಡ್ಸ್ ರೋಗವನ್ನು ಹರಡುವ ಯೋಜನೆಯನ್ನು ಹಾಕಿಕೊಂಡಿದೆ ಎಂದು ಖುರ್ಧೀಶ್ ಸಿರಿಯಾನ್ ಎಆರ್ಎ ಸುದ್ದಿಯನ್ನು ಪ್ರಕಟಿಸಿದೆ.
ಈ ಹದಿನಾರು ಉಗ್ರರ ವಿದೇಶಿ ದಾಳಿಕೋರರಾಗಿದ್ದು, ಇವರು ಇಬ್ಬರು ಮೋರೋಕನ್ ಮಹಿಳೆಯರ ಜತೆ ಲೈಂಗಿಕ ಕ್ರಿಯೆ ನಡೆಸಿದ್ದರ ಪರಿಣಾಮ ಅವರಿಗೆ ಏಡ್ಸ್ ಮಾರಣಾಂತಿಕ ಕಾಯಿಲೆ ಬಾಧಿಸಿದೆ.
ಏಡ್ಸ್ ಮಾರಣಾಂತಿಕ ಕಾಯಿಲೆಗೀಡಾಗಿರುವ ಹದಿನಾರು ಉಗ್ರರನ್ನು ಪ್ರತ್ಯೇಕ ಕೇಂದ್ರವೊಂದರಲ್ಲಿ ಇಡಲಾಗಿದ್ದು, ಅವರನ್ನು ಆತ್ಮಾಹುತಿ ಬಾಂಬರ್ ಗಳನ್ನಾಗಿ ಬಳಸಲು ಇಸಿಸ್ ಉಗ್ರ ಸಂಘಟನೆ ಚಿಂತಿಸಿದೆ.
Advertisement