
ರಿಯಾದ್: ಹಜ್‍ಯಾತ್ರೆಗಾಗಿ ಮೆಕ್ಕಾಗೆ ತೆರಳುವವರಿಗೆ ಸೌದಿ ಸರ್ಕಾರ ಒಂದಷ್ಟು ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ವಯಾಗ್ರಾ, ಲೈಂಗಿಕ ಕ್ರೀಮ್ ಗಳು, ತೈಲಗಳು, ಅಶ್ಲೀಲ ಚಿತ್ರ, ವಿಡಿಯೋಗಳನ್ನು ತಮ್ಮ ಜತೆ ಇಟ್ಟು ಕೊಳ್ಳುವುದನ್ನು ಸರ್ಕಾರ ನಿಷೇಧಿಸಿದೆ.
ಇದಲ್ಲದೆ ಖಾಶ್ ಖಾಶ್, ಸಿಸ್ಟೋನ್, ಖಮೀರಾ, ಗುಟ್ಕಾ, ಖೈನಿ, ಗುಲ್, ಪೆಪ್ಪರ್ ಮೆಂಟ್ ಅಥವಾ ಯಾವುದೇ ರೀತಿಯ ತಂಬಾಕುಗಳನ್ನು ಹಜ್ ಯಾತ್ರಿಗಳು ತೆಗೆದುಕೊಂಡು ಹೋಗುವಂತಿಲ್ಲ ಎಂದು ಭಾರತೀಯ ಹಜ್ ಸಮಿತಿಯು ಸೌದಿ ಸರ್ಕಾರದ ನಿಯಮಾವಳಿಗಳನ್ನು ಉಲ್ಲೇಖಿಸಿ ಎಚ್ಚರಿಸಿದೆ. ಇದರ ಜತೆಗೆ, ರಾಜಕೀಯ ಸಾಹಿತ್ಯಗಳನ್ನೂ ಯಾತ್ರಿಗಳು ಇಟ್ಟುಕೊಳ್ಳುವಂತಿಲ್ಲ ಎಂದು ಸಮಿತಿಯು ಎಚ್ಚರಿಸಿದೆ.
Advertisement