
ಲಂಡನ್: ಐಎಸ್‍ಐಎಸ್ ಉಗ್ರ ಜಿಹಾದಿ ಜಾನ್ ಬ್ರಿಟನ್‍ಗೆ ವಾಪಸ್ ಬರ್ತಾನಂತೆ. ಸುಮ್ನೆಪ್ರವಾಸಕ್ಕಲ್ಲ, ಬ್ರಿಟನ್ ಪ್ರಜೆಗಳ ತಲೆ ಕತ್ತರಿಸಲಿಕ್ಕಂತೆ.
ಹೀಗಂತ ಅವನೇ ಹೇಳಿಕೊಂಡಿದ್ದಾನೆ. ಒಂದು ನಿಮಿಷ, 17 ಸೆಕೆಂಡ್‍ಗಳ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಆತ, ಬ್ರಿಟನ್‍ಗೆ ನೇರವಾಗಿಯೇ ಬೆದರಿಕೆ ಹಾಕಿದ್ದಾನೆ ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ.
ಮೂಲತಃ ಬ್ರಿಟನ್ ಪ್ರಜೆ ಯಾಗಿರುವ ಮಹಮ್ಮದ್ ಎಮಾ್ವಜಿ, ಐಎಸ್‍ಐಎಸ್ ಸೇರಲಿಕ್ಕಾಗಿ ಸಿರಿಯಾಗೆ ಹೋಗಿ-ದ್ದಾನೆ. ಈತನ ಉದ್ದೇಶ ಜಗತ್ತಿನಲ್ಲಿ ಮುಸ್ಲಿಂರಲ್ಲದೇ ಇರುವವರನ್ನು ಕೊಲ್ಲುವುದಂತೆ. ನಾನು ಸದ್ಯದಲ್ಲೇ ನಾನು ಖಾಲಿ ಫಾ(ಐಎಸ್‍ಐಎಸ್ ನಾಯಕ)ನ ಜತೆ ಬ್ರಿಟನ್‍ಗೆ ಬರುತ್ತೇನೆ, ಅಲ್ಲಿ ಮುಸ್ಲಿಮೇತರರ ಕೊಲ್ಲುತ್ತೇನೆ, ಅವರ ತಲೆ ಕತ್ತರಿಸುತ್ತೇನೆ ಎಂದಿದ್ದಾನೆ.
Advertisement