ಆಶ್ಲೆ ಮ್ಯಾಡಿಸನ್: ಇಬ್ಬರ ಆತ್ಮಹತ್ಯೆ

ಆಶ್ಲೆ ಮ್ಯಾಡಿಸನ್ ಲೈಂಗಿಕ ಡೇಟಿಂಗ್ ವೆಬ್ ಸೈಟ್ ಮಾಹಿತಿ ಹ್ಯಾಕ್ ಮಾಡಿದ್ದರಿಂದ ಘಾಸಿಗೊಂಡಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಟೊರೊಂಟೋ: ಆಶ್ಲೆ ಮ್ಯಾಡಿಸನ್ ಲೈಂಗಿಕ ಡೇಟಿಂಗ್ ವೆಬ್ ಸೈಟ್ ಮಾಹಿತಿ ಹ್ಯಾಕ್ ಮಾಡಿದ್ದರಿಂದ ಘಾಸಿಗೊಂಡಿರುವ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಟೊರೊಂಟೋ ಪೊಲೀಸರು ತಿಳಿಸಿದ್ದಾರೆ.

ಜತೆಗೆ, ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸಿರುವ ಹ್ಯಾಕರ್‍ಗಳ ಕೃತ್ಯವನ್ನು ಸಹಿಸಲಾಗದು ಎಂದೂ ಎಚ್ಚರಿಕೆ ನೀಡಿದ್ದಾರೆ. ಆಶ್ಲೆ ಮ್ಯಾಡಿಸನ್ ವೆಬ್‍ಸೈಟ್ ಹ್ಯಾಕ್ ಘಟನೆಯನ್ನು ಜಗತ್ತಿನ ಅತಿದೊಡ್ಡ ಮಾಹಿತಿ ವಂಚನೆ ಎಂದು ಹೇಳಿರುವ ಪೊಲೀಸರು, ಇದರಿಂದಾಗಿ ಕಳೆದ ತಿಂಗಳು 30 ಮಿಲಿಯನ್‍ಗೂ ಅಧಿಕ ಇ-ಮೇಲ್ ವಿಳಾಸ ಹಾಗೂ ಹಲವು ಕ್ರೆಡಿಟ್ ಕಾರ್ಡ್ ಮಾಹಿತಿ ಸೋರಿಕೆಯಾಗಿತ್ತು ಎಂದಿದ್ದಾರೆ.

ಇಬ್ಬರ ಆತ್ಮಹತ್ಯೆ ಕುರಿತ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವ ಪೊಲೀಸರು, ಪ್ರಕರಣದ ತನಿಖೆಯನ್ನು ಕೆನಡಾ ಪ್ರೈವೆಸಿ ಕಮೀಷನರ್‍ಗೆ ವಹಿಸಲಾಗಿದ್ದು, ಈಗಾಗಲೇ ಆಶ್ಲೆ ಮ್ಯಾಡಿಸನ್ ವೆಬ್‍ಸೈಟ್ ಸಂಸ್ಥೆ ಹ್ಯಾಕರ್‍ಗಳ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ಡಾಲರ್ ಬಹುಮಾನ ಪ್ರಕಟಿಸಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com