ರು.1 ಕೋಟಿ ಮೌಲ್ಯದ ತಪ್ಪಿಗೆ ಕ್ಷಮೆ

ಟೀ ಅಂಗಡಿಯಲ್ಲಿ ಕೈತಪ್ಪಿ ಗಾಜಿನ ಲೋಟ ಬೀಳಿಸಿ ಒಡೆದರೆ ಹತ್ತು ರುಪಾಯಿ ವಸೂಲಿ ಮಾಡ್ತಾರೆ. ದಾರೀಲಿ ಹೋಗ್ತಾ ಗಾಡಿಗಳೆರಡು ಸಣ್ಣದಾಗಿ ತಾಕಿಕೊಂಡರೂ ಜಗಳ ಆಡಿ ಅಷ್ಟೋ ಇಷ್ಟೋ ಪೀಕುವಂತೆ ಮಾಡ್ತಾರೆ. ಅಂಥಾದ್ರಲ್ಲಿ ಒಂದು ಕೋಟಿ ಮೌಲ್ಯದ ಅಪೂರ್ವ ಕಲಾಕೃತಿಯೊಂದನ್ನು...
ಫೇಸ್ ಆಫ್ ಲಿಯೋನಾರ್ಡೋ ಪೇಂಟಿಂಗ್ ಪ್ರದರ್ಶನದ ವೇಳೆ ಬಾಲಕ ಕಾಲು ಎಡವಿ ಕಲಾಕೃತಿ ಮೇಲೆ ಬೀಳುತ್ತಿರುವ ಚಿತ್ರ.
ಫೇಸ್ ಆಫ್ ಲಿಯೋನಾರ್ಡೋ ಪೇಂಟಿಂಗ್ ಪ್ರದರ್ಶನದ ವೇಳೆ ಬಾಲಕ ಕಾಲು ಎಡವಿ ಕಲಾಕೃತಿ ಮೇಲೆ ಬೀಳುತ್ತಿರುವ ಚಿತ್ರ.

ಥೈವಾನ್: ಟೀ ಅಂಗಡಿಯಲ್ಲಿ ಕೈತಪ್ಪಿ ಗಾಜಿನ ಲೋಟ ಬೀಳಿಸಿ ಒಡೆದರೆ ಹತ್ತು ರುಪಾಯಿ ವಸೂಲಿ ಮಾಡ್ತಾರೆ. ದಾರೀಲಿ ಹೋಗ್ತಾ ಗಾಡಿಗಳೆರಡು ಸಣ್ಣದಾಗಿ ತಾಕಿಕೊಂಡರೂ ಜಗಳ ಆಡಿ ಅಷ್ಟೋ ಇಷ್ಟೋ ಪೀಕುವಂತೆ ಮಾಡ್ತಾರೆ. ಅಂಥಾದ್ರಲ್ಲಿ ಒಂದು ಕೋಟಿ ಮೌಲ್ಯದ ಅಪೂರ್ವ ಕಲಾಕೃತಿಯೊಂದನ್ನು ಹಾಳುಮಾಡಿದರೆ ಸುಮ್ಮನಿರೋದುಂಟಾ? ಥೈವಾನ್ ನಲ್ಲಿ ಇಂಥದೊಂದು ತಪ್ಪಿಗೆ ತಪ್ಪಿತಸ್ಥನಿಂದ ಒಂದು ನಯಾಪೈಸೆಯಾನ್ನೂ ವಸೂಲು ಮಾಡದೆ ಬಿಟ್ಟುಕಳಿಸಲಾಗಿದೆ!

ಥೈವಾನ್ ನಲ್ಲಿ ಒಂದು ಅಪರೂಪದ ಕಲಾಪ್ರದರ್ಶನವಿತ್ತು. ಫೇಸ್ ಆಫ್ ಲಿಯೋನಾರ್ಡೋ ಎಂಬ ಪೇಂಟಿಂಗ್ ಪ್ರದರ್ಶನವದು. ಇದನ್ನು ನೋಡಲು ಭಾರಿ ಜಂಗುಳಿಯೇ ನಡೆದಿತ್ತು. 12 ವರ್ಷದ ಬಾಲಕನೊಬ್ಬ ಅಲ್ಲಿಗೆ ತನ್ನ ಬಳಗದೊಂದಿಗೆ ಬಂದಿದ್ದ. ಕೈಲೊಂದು ಕೂಲ್ ಡ್ರಿಂಕ್ಸ್ ಟಿನ್ ಹಿಡ್ಕೊಂಡು ಯಾವುದೋ ಯೋಚನೆಯಲ್ಲಿ ಕೊಂಚ ಅಜಾಗರೂಕತೆಯಿಂದಲೇ ನಡೆದು ಬಂದ ಆತನಿಕೆ ಮರುಕ್ಷಣದಲ್ಲಿ ತನ್ನಿಂದ ಭಾರಿ ಅನಾಹುತವಾಗಬಹುದೆಂದು ಕನಸು ಮನಸಿನಲ್ಲೂ ಅನಿಸಿರಲಿಕ್ಕಿಲ್ಲ. ನಡೆಯುವವ ಎಡವುದು ಸಹಜ ಎಂಬಂತೆ ಕಾಲು ಹೊರಳಿ ವಾಲಿದ್ದಾನೆ.

ಆಯತಪ್ಪಿದ ಆತ ಆಧಾರಕ್ಕೆ ಅನಿವಾರ್ಯವಾಗಿ ಪಕ್ಕದಲ್ಲಿದ್ದ ಕಲಾಕೃತಿಯ ಮೇಲೇ ಕೈಯಿಟ್ಟಿದ್ದಾನೆ. ಕೈಲಿದ್ದ ಟಿನ್ ಒತ್ತಿ ಆ ಕಲಾಕೃತಿ ಜಖಂ ಆಗಿದೆ. ನಲುಗಿ ಕಂಗಾಲಾದ ಹುಡುಗ ಒಂದೆರಡು ಕ್ಷಣ ಅತ್ತಿತ್ತ ನೋಡುತ್ತಿದ್ದ ಹಾಗೆಯೇ ಹಿರಿಯರೊಬ್ಬರು ಬಂದು ಆತನನ್ನು ಗೆದರಿದ್ದಾರೆ. ನಂತರ ಆತ ಅಲ್ಲಿಂದ ಹೊರಟುಹೋಗಿದ್ದಾನೆ. ಇದಿಷ್ಟು ಸಿಸಿ ಕ್ಯಾಮೆರದಲ್ಲಿ ದಾಖಲಾಗಿದೆ.

ಸಿಸಿ ಟಿವಿ ಫುಟೇಜ್ ಗಮನಿಸಿ ಇದನ್ನು ಆಕಸ್ಮಿಕ ಎಂಬ ಪರಿಗಣಿಸಿದ ಆಯೋಜಕರು, ಮೊದಲೇ ಗಾಬರಿಯಾಗಿದ್ದ ಆ ಹುಡುಗನನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಲು ಒಪ್ಪಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com