
ನ್ಯೂಯಾರ್ಕ್: ನೇರಪ್ರಸಾರ ಕಾರ್ಯಕ್ರಮ ನಡೆಸುತ್ತಿದ್ದ ಇಬ್ಬರು ಅಮೇರಿಕ ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ ಡಬ್ಲ್ಯೂಡಿಬಿಜೆ 7 ವರದಿ ಮಾಡಿದೆ.
ಬೆಡ್ಫೋರ್ಡ್ ಪ್ರಾಂತದಲ್ಲಿ ಈ ಘಟನೆ ನಡೆದಿದೆ, ನೇರಪ್ರಸಾರದಲ್ಲಿ ವರದಿ ಮಾಡುತ್ತಿದ್ದ ವರದಿಗಾರರಿಬ್ಬರಿಗೆ ಗುಂಡು ಹೊಡೆದಿದ್ದು ಸ್ಥಳದಲ್ಲೇ ಇಬ್ಬರೂ ಸಾವನ್ನಪ್ಪಿದ್ದಾರೆ. ಅಲಿಸನ್ ಪಾರ್ಕರ್ ಮತ್ತು ಆಡಮ್ ವಾರ್ಡ್ ಮೃತ ಪತ್ರಕರ್ತರು ಎಂದು ಮಾಧ್ಯಮ ಸಂಸ್ಥೆ ತಿಳಿಸಿದೆ.
ಪತ್ರಕರ್ತರಿಬ್ಬರ ಮೇಲೆ ಗುಂಡಿನ ದಾಳಿಯಾಗಿರುವುದು ನೇರಪ್ರಸರದಲ್ಲಿ ದಾಖಲಾಗಿದೆ. ಹತ್ಯೆ ಹಿಂದಿನ ಕಾರಣ ಈ ವರೆಗೂ ತಿಳಿದುಬಂದಿಲ್ಲ, ಹಂತಕರನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement