ಪಾಕ್ ಮಾಜಿ ಪ್ರಧಾನಿ ಗಿಲಾನಿ ವಿರುದ್ಧ ಬಂಧನ ವಾರಂಟ್ ಜಾರಿ

ಬಹುಕೋಟಿ ಹಗರಣ ಸಂಬಂಧ ಪಾಕಿಸ್ತಾನ ಮಾಜಿ ಪ್ರಧಾನಿ ಯೂಸಫ್ ರಾಜಾ ಗಿಲಾನಿ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ನಾಯಕ ಮುಖ್‌ದೂಮ್ ಅಮಿನ್...
ಯೂಸಫ್ ರಾಜಾ ಗಿಲಾನಿ
ಯೂಸಫ್ ರಾಜಾ ಗಿಲಾನಿ

ಕರಾಚಿ: ಬಹುಕೋಟಿ ಹಗರಣ ಸಂಬಂಧ ಪಾಕಿಸ್ತಾನ ಮಾಜಿ ಪ್ರಧಾನಿ ಯೂಸಫ್ ರಾಜಾ ಗಿಲಾನಿ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ನಾಯಕ ಮುಖ್‌ದೂಮ್ ಅಮಿನ್ ಫಹಿಮ್ ಅವರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಲಾಗಿದೆ.

ವ್ಯಾಪಾರ ಅಭಿವೃದ್ಧಿ ಪ್ರಾಧಿಕಾರ(ಟಿಡಿಎ)ದಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಫೆಡರಲ್ ತನಿಖಾ ಸಂಸ್ಥೆ(ಎಫ್‌ಐಎ) ಚಾರ್ಜ್‌ಶೀಟ್ ಸಲ್ಲಿಸಿದ ನಂತರ ಭ್ರಷ್ಟಾಚಾರ ನಿಗ್ರಹ ಕೋರ್ಟ್ ಗಿಲಾನಿ ಹಾಗೂ ಫಹಿಮ್ ವಿರುದ್ಧ ವಾರಂಟ್ ಜಾರಿ ಮಾಡಿದೆ ಎಂದು ಡಾನ್ ವರದಿ ಮಾಡಿದೆ.

ನಕಲಿ ಕಂಪನಿಗಳ ಮೂಲಕ ಕೋಟ್ಯಾಂತರ ರುಪಾಯಿ ವಂಚಿಸಿದ ಆರೋಪದ ಮೇಲೆ ಪಿಪಿಪಿಯ ಈ ಇಬ್ಬರು ನಾಯಕರ ಹಾಗೂ ಕೆಲವು ನಿವೃತ್ತ ಅಧಿಕಾರಿಗಳ ವಿರುದ್ಧ ಎಫ್‌ಐಎ ಎಪ್‌ಐಆರ್ ದಾಖಲಿಸಿತ್ತು. ಆದರೆ ಪ್ರಕರಣದ ವಿಚಾರಣೆಗೆ ಹಾಜರಾಗದ ಗಿಲಾನಿ ಹಾಗೂ ಫಹಿಮ್ ವಿರುದ್ಧ ಕೋರ್ಟ್ ಇಂದು ಬಂಧನ ವಾರಂಟ್ ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com