ಭಾರತೀಯ ವಿಜ್ಞಾನಿಗೆ ಮೊದಲ ಸುನ್ಹಕ್ ಶಾಂತಿ ಪ್ರಶಸ್ತಿ

ಭಾರತದಲ್ಲಿ ಜಲಚರ ಸಾಕಣೆ ವಿಷಯದಲ್ಲಿ ಅಗ್ರಗಣ್ಯರಾಗಿರುವ ಕೃಷಿ ವಿಜ್ಞಾನಿ ಡಾ. ಮೊದಡಗು ವಿಜಯ್ ಗುಪ್ತ ಅವರಿಗೆ ಸುನ್ಹಕ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಸುನ್ಹಕ್ ಪ್ರಶಸ್ತಿ ವಿಜೇತ ಭಾರತೀಯ ವಿಜ್ಞಾನಿ ಹಾಗೂ ದ್ವೀಪ ರಾಷ್ಟ್ರದ ಅಧ್ಯಕ್ಷ
ಸುನ್ಹಕ್ ಪ್ರಶಸ್ತಿ ವಿಜೇತ ಭಾರತೀಯ ವಿಜ್ಞಾನಿ ಹಾಗೂ ದ್ವೀಪ ರಾಷ್ಟ್ರದ ಅಧ್ಯಕ್ಷ

ಸಿಯೋಲ್: ಭಾರತದಲ್ಲಿ ಜಲಚರ ಸಾಕಣೆ ವಿಷಯದಲ್ಲಿ ಅಗ್ರಗಣ್ಯರಾಗಿರುವ ಕೃಷಿ ವಿಜ್ಞಾನಿ ಡಾ. ಮೊದಡಗು ವಿಜಯ್ ಗುಪ್ತ ಅವರಿಗೆ ಸುನ್ಹಕ್  ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸುನ್ಹಕ್ ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ನೀಡಲಾಗುತ್ತಿದ್ದು, ಭಾರತೀಯ ವಿಜ್ಞಾನಿ ಈ ಪ್ರಶಸ್ತಿಯನ್ನು ಪಡೆದ ಮೊದಲಿಗ ಎಂಬ ಹೆಗ್ಗಳಿಕೆಗೆ ವಿಜಯ್ ಗುಪ್ತ ಪಾತ್ರರಾಗಿದ್ದಾರೆ. ಭಾರತೀಯ ವಿಜ್ಞಾನಿಯೊಂದಿಗೆ ಕಿರಿಬಾಟಿ ದ್ವೀಪ ರಾಷ್ಟ್ರದ ಅಧ್ಯಕ್ಷ ಆಂಟೋ ಟಾಂಗ್ ಸಹ ಸುನ್ಹಕ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಸಿಯೋಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಪ್ರಶಸ್ತಿ ವಿಜೇತರಿಗೆ ಸುನ್ಹಕ್ ಪ್ರಶಸ್ತಿಯೊಂದಿಗೆ ಒಂದು ಮಿಲಿಯನ್ ಡಾಲರ್ ನ್ನೂ ನೀಡಿ ಗೌರವಿಸಲಾಗಿದೆ. ಕಾರ್ಯಕ್ರಮದಲ್ಲಿ ವಿಶ್ವದ ಅನೇಕ ಗಣ್ಯರು ಉಪಸ್ಥಿತರಿದ್ದರು. ಜಲಚರ ಸಾಕಣೆ ವಿಷಯದಲ್ಲಿ ಬಾಂಗ್ಲಾದೇಶ ಹಾಗು ಹಲವು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ  ಮಾಡಿರುವ ಮಹತ್ವದ ಸಂಶೋಧನೆಯನ್ನು ಗುರುತಿಸಿ ಡಾ.ಎಂ ವಿಜಯ್ ಗುಪ್ತ ಅವರಿಗೆ ಸುನ್ಹಕ್  ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ.

ಸಣ್ಣ ದ್ವೀಪ ರಾಷ್ಟ್ರಗಳಿಗೆ ಮಾರಕವಾಗಿ ಪರಿಣಮಿಸಿರುವ ಕಾರ್ಬನ್ ಎಮಿಷನ್(ಇಂಗಾಲದ ಹೊರಸೂಸುವಿಕೆ) ವಿರುದ್ಧ ಹೋರಾಡಿದ್ದನ್ನು ಗುರುತಿಸಿ ಕಿರಿಬಾಟಿ ದ್ವೀಪದ ಅಧ್ಯಕ್ಷ ಆಂಟೋ ಟಾಂಗ್ ಅವರಿಗೂ ಪ್ರಶಸ್ತಿಯನ್ನು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com