ಲಿಂಗ ತಾರತಮ್ಯ ಸರಿಪಡಿಸಲು ಟ್ವಿಟ್ಟರ್ ಮಹಿಳಾ ಉದ್ಯೋಗಿಗಳ ನೇಮಕ

ಪುರುಷರು ಮತ್ತು ಮಹಿಳೆಯರ ನಡುವಿನ ಅಂತರವನ್ನು ಸರಿಪಡಿಸಲು ಟ್ವಿಟ್ಟರ್ ಮುಂದಿನ ವರ್ಷದಲ್ಲಿ ಹೆಚ್ಚು ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು...
ಟ್ವಿಟ್ಟರ್ ಚಿಹ್ನೆ
ಟ್ವಿಟ್ಟರ್ ಚಿಹ್ನೆ

ವಾಷಿಂಗ್ಟನ್ : ಪುರುಷರು ಮತ್ತು ಮಹಿಳೆಯರ ನಡುವಿನ ಅಂತರವನ್ನು ಸರಿಪಡಿಸಲು ಟ್ವಿಟ್ಟರ್ ಮುಂದಿನ ವರ್ಷದಲ್ಲಿ ಹೆಚ್ಚು ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಟ್ವಿಟ್ಟರ್ ಸಾಮಾಜಿಕ ಜಾಲತಾಣ ಸಂಸ್ಥೆ ನಿರ್ಧರಿಸಿದೆ.

ಮುಂದಿನ ವರ್ಷ ಶೇಕಡಾ 35ರಷ್ಟು ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಟ್ವಿಟ್ಟರ್ ಇಂದು ಪ್ರಕಟಿಸಿದೆ.

ವಿಶ್ವ ಮಟ್ಟದಲ್ಲಿ ಟ್ವಿಟ್ಟರ್ 4 ಸಾವಿರದ 100 ಮಂದಿ ಉದ್ಯೋಗಿಗಳನ್ನು ಹೊಂದಿದ್ದು, ತಾಂತ್ರಿಕ ವರ್ಗದಲ್ಲಿ ಶೇಕಡಾ 16ರಷ್ಟು ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಹೊಂದಿದೆ.

ಟ್ವಿಟ್ಟರ್ ಸಂಸ್ಥೆಯ ಉಪಾಧ್ಯಕ್ಷೆ ಮತ್ತು ಹೆಚ್ ಆರ್ ನ ಜಾನೆಟ್ ವಾನ್ ಪುಸ್ಸೆ, ಟ್ವಿಟ್ಟರ್ ನ ರೂಪುರೇಷೆಗಳನ್ನು ಬದಲಾಯಿಸಲಾಗುತ್ತಿದ್ದು,ಟ್ವಿಟ್ಟರ್ ನ್ನು ಬಳಸುತ್ತಿರುವ ಜನ ಸಮುದಾಯವನ್ನು ಸುಲಭವಾಗಿ ತಲುಪಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com