ಹೌದು, ಉಮರ್ 2013ರಲ್ಲೇ ಸತ್ತಿದ್ದ

ಮುಲ್ಲಾ ಒಮರ್‍ನ ಸಾವಿನ ಸತ್ಯವನ್ನು ಎರಡು ವರ್ಷಗಳ ಕಾಲ ಹೊರ ಜಗತ್ತಿಂದ ಮುಚ್ಚಿಟ್ಟಿದ್ದನ್ನು ತಾಲಿಬಾನ್ ಇದೇ ಮೊದಲ ಬಾರಿಗೆ...
ಮುಲ್ಲಾ ಉಮರ್
ಮುಲ್ಲಾ ಉಮರ್

ಕಾಬೂಲ್: ಮುಲ್ಲಾ ಒಮರ್‍ನ ಸಾವಿನ ಸತ್ಯವನ್ನು ಎರಡು ವರ್ಷಗಳ ಕಾಲ ಹೊರ ಜಗತ್ತಿಂದ ಮುಚ್ಚಿಟ್ಟಿದ್ದನ್ನು ತಾಲಿಬಾನ್ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದೆ.

ಒಸಮಾ ಬಿನ್ ಲಾಡೆನ್ ಸಾವಿನ ನಂತರ ತಾಲಿಬಾನ್‍ನ ನೇತೃತ್ವವಹಿಸಿದ್ದ ಮುಲ್ಲಾ ಒಮರ್ 2013ರಲ್ಲೇ ಮೃತಪಟ್ಟಿದ್ದ ಎಂದು ಅಫ್ಘಾನಿಸ್ತಾನದ ಗುಪ್ತಚರದಳ ಇತ್ತೀಚೆಗೆ ಹೇಳಿತ್ತು. ಆದರೂ ತಾಲಿಬಾನ್ ಮಾತ್ರ ಮುಲ್ಲಾ ಒಮರ್ ಹೆಸರಲ್ಲಿ ಇತ್ತೀಚಿನ ವರೆಗೂ ಹೇಳಿಕೆಗಳನ್ನು ಹೊರಡಿಸುತ್ತಲೇ ಇತ್ತು.

ಇದರಿಂದ ಮುಲ್ಲಾ ಒಮರ್ ಇನ್ನೂ ಬದುಕಿದ್ದಾನಾ ಎನ್ನುವ ಅನುಮಾನ ಗುಪ್ತಚರದಳಗಳಿಗಿತ್ತು. ಆದರೆ, ಇದೇ ಮೊದಲ ಬಾರಿಗೆ ತಾಲಿಬಾನ್ ಮುಲ್ಲಾ ಒಮರ್ ಏ.23, 2013ರಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಿದೆ. ಮುಲ್ಲಾ ಸಾವಿನ ಸತ್ಯ ಸಂಘಟನೆಯ ಪ್ರಮುಖ ವ್ಯಕ್ತಿಗಳಿಗಷ್ಟೇ ಗೊತ್ತಿತ್ತು. ಯಾಕೆಂದರೆ ಆಫ್ಘನ್ ನಲ್ಲಿ ಕಾದಾಟ ನಡೆಸುತ್ತಿದ್ದ ಮುಜಾಹಿದೀನ್ ಹಾಗೂ ವಿದೇಶಿ ಯೋಧರ ಪಾಲಿಗೆ 2013 ಪ್ರಮುಖ ಕಾಲಘಟ್ಟವಾಗಿತ್ತು.

2014ರಲ್ಲಿ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ಆಫ್ಘನ್ ನಿಂದ ಹೊರ ಹೋಗುವುದಾಗಿ ಹೇಳಿದ್ದವು. ಈ ಹಿನ್ನಲೆಯಲ್ಲಿ ಮುಲ್ಲಾ ಸಾವಿನ ಸುದ್ದಿಯನ್ನು ಉದ್ದೇಶಪೂರ್ವಕವಾಗಿ ಹೊರಜಗತ್ತಿಂದ ದೂರ ಇಡಲಾಯಿತು ಎಂದಿದೆ ತಾಲಿಬಾನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com