ಕೊಹಿನೂರ್ ವಜ್ರವನ್ನು ಪಾಕಿಸ್ತಾನಕ್ಕೆ ತರಲು ಆಗ್ರಹ

ವಿಶ್ವದ ಅತ್ಯಮೂಲ್ಯ ಕೊಹಿನೂರ್ ವಜ್ರವನ್ನು ಪಾಕಿಸ್ತಾನಕ್ಕೆ ಮರಳಿ ತರುವಂತೆ ಸರಕಾರವನ್ನು ಆಗ್ರಹಿಸಲು ಲಾಹೋರ್ ನ್ಯಾಯಾಲಯದಲ್ಲಿ ಮೊಕದ್ದಮೆ ...
ಕೊಹಿನೂರ್ ವಜ್ರ
ಕೊಹಿನೂರ್ ವಜ್ರ

ಲಾಹೋರ್;  ವಿಶ್ವದ ಅತ್ಯಮೂಲ್ಯ ಕೊಹಿನೂರ್ ವಜ್ರವನ್ನು ಪಾಕಿಸ್ತಾನಕ್ಕೆ ಮರಳಿ ತರುವಂತೆ ಸರಕಾರವನ್ನು ಆಗ್ರಹಿಸಲು ಲಾಹೋರ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ.

ಭಾರತಕ್ಕೆ ಸೇರಿದ್ದ  ಕೊಹಿನೂರ್ ವಜ್ರವನ್ನು ಇಂಗ್ಲೆಂಡ್‌ಗೆ ತೆಗೆದುಕೊಂಡು ಹೋಗಲಾಗಿದೆ, ಅದನ್ನು ವಾಪಸ್ ತರಲು ಭಾರತವು ಈಗಾಗಲೇ ಪ್ರಯತ್ನಗಳನ್ನು ಮಾಡುತ್ತಿದೆ.

ಈ ನಡುವೆ ಬ್ಯಾರಿಸ್ಟರ್ ಜಾವೇಜ್ ಇಕ್ಬಾರ್ ಜಾಫ್ರಿ ಎಂಬುವರು ಲಾಹೋರ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಮಹಾರಾಜಾ ರಣಜೀತ್ ಸಿಂಗ್ ಅವರ ಮೊಮ್ಮಗ ದಲೀಪ್ ಸಿಂಗ್ ಅವರಿಂದ ಬ್ರಿಟನ್ ಈ ವಜ್ರವನ್ನು ಕಿತ್ತುಕೊಂಡು ಹೋಗಿದೆ ಎಂದು ಆರೋಪಿಸಿದ್ದಾರೆ.

'1953ರಲ್ಲಿ ಈಗಿರುವ ರಾಣಿ ಎಲಿಜಬೆತ್ ಪಟ್ಟಾಭಿಷೇಕ ಸಂದರ್ಭದಲ್ಲಿ ಕಿರೀಟಕ್ಕೆ ಮಣಿಯಾಗಿ ಈ ಕೊಹಿನೂರ್ ವಜ್ರವನ್ನು ಅಲಂಕರಿಸಲಾಗಿತ್ತು. 105 ಕ್ಯಾರೆಟ್‌ನ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಈ ವಜ್ರದ ಮೇಲೆ ರಾಣಿ ಎಲಿಜಬೆತ್‌ಗೆ ಯಾವುದೇ ಹಕ್ಕಿಲ್ಲ' ಎಂದು ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

ಕೊಹಿನೂರ್ ವಜ್ರವು ಪಂಜಾಬ್ ಪ್ರಾಂತ್ಯದ ಸಾಂಸ್ಕೃತಿಕ ಪರಂಪರೆಯಾಗಿದೆ ಮತ್ತು ಅಲ್ಲಿನ ನಾಗರಿಕರೇ ಅದರ ಒಡೆಯರು ಎಂದು ಜಾಫ್ರಿ ವಾದಿಸಿದ್ದು, ಬ್ರಿಟಿಷ್ ಸರಕಾರದಿಂದ ಅದನ್ನು ತರುವಂತೆ ಪಾಕಿಸ್ತಾನದ ಸರಕಾರಕ್ಕೆ ಸೂಚಿಸುನಂತೆ ಕೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com