ಇಸೀಸ್ ಉಗ್ರರಿಂದ ಇರಾಕ್ ನ ತೈಲೋತ್ಪನ್ನ ಕಳ್ಳಸಾಗಣೆ: ಇರಾಕ್ ಪ್ರಧಾನಿ

ಇಸ್ಲಾಮಿಕ್ ಸ್ಟೇಟ್ ಉಗ್ರರು ತೈಲೋತ್ಪನ್ನ ಕಳ್ಳ ಸಾಗಣಿಕೆ ಮಾಡುತ್ತಿದ್ದಾರೆ ಎಂದು ಇರಾಕ್ ನ ಪ್ರಧಾನಿ ಹೈದರ್ ಅಲ್ ಹೇಳಿದ್ದಾರೆ.
ಇಸೀಸ್ ಉಗ್ರರು (ಸಂಗ್ರಹ ಚಿತ್ರ)
ಇಸೀಸ್ ಉಗ್ರರು (ಸಂಗ್ರಹ ಚಿತ್ರ)

ಬಾಗ್ದಾದ್: ಇಸ್ಲಾಮಿಕ್ ಸ್ಟೇಟ್ ಉಗ್ರರು ತೈಲೋತ್ಪನ್ನ ಕಳ್ಳ ಸಾಗಣಿಕೆ ಮಾಡುತ್ತಿದ್ದಾರೆ ಎಂದು ಇರಾಕ್ ನ ಪ್ರಧಾನಿ ಹೈದರ್ ಅಲ್ ಹೇಳಿದ್ದಾರೆ.
ಟರ್ಕಿ ಮೂಲಕ ಇರಾಕ್ ನ ತೈಲ ಉತ್ಪನ್ನಗಳನ್ನು ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಇರಾಕ್ ನ ಬಹುತೇಕ ತೈಲ ಉತ್ಪನ್ನಗಳನ್ನು ಟರ್ಕಿ ಮೂಲಕ ಇಸೀಸ್ ಉಗ್ರರು ಕಳ್ಳಸಾಗಾಣಿಕೆ ಮಾಡುತ್ತಿದ್ದು ಇಸೀಸ್ ಸಂಘಟನೆ ಕಳ್ಳಸಾಗಣಿಕೆ  ತಡೆಗಟ್ಟಲು ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಇರಾಕ್ ನ ಪ್ರಧಾನಿ ಕಾರ್ಯಾಲಯ ಹೇಳಿಕೆ ಬಿಡುಗಡೆ ಮಾಡಿದೆ. 
ಜರ್ಮನಿಯ ವಿದೇಶಾಂಗ ಸಚಿವರಾದ  ಫ್ರಾಂಕ್ ವಾಲ್ಟರ್ ಸ್ಟೇನ್ ಮೀಯರ್ ಅವರೊಂದಿಗೆ ಇರಾಕ್ ಪ್ರಧಾನಿ ಮಾತುಕತೆ ನಡೆಸಿದ್ದು ಇಸೀಸ್ ಉಗ್ರರ ನಿರ್ಮೂಲನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಮಾತುಕತೆ ವೇಳೆ ಟರ್ಕಿ ಹಾಗೂ ಇರಾಕ್ ನ ದ್ವಿಪಕ್ಷೀಯ ಸಂಬಂಧ ಹಾಳಾಗಿರುವ ಬಗ್ಗೆ ಹೈದರ್ ಅಲ್ ಅಬಾದಿ ಅವರು ಮಾಹಿತಿ ನೀಡಿದ್ದು ಇರಾಕ್ ನ ಅನುಮತಿ ಇಲ್ಲದೇ ಉತ್ತರ ಇರಾಕ್ ಗೆ ಟರ್ಕಿ ತರಬೇತಿಗಾಗಿ ಹೆಚ್ಚುವರಿ ಪಡೆಗಳನ್ನು ಕಳಿಸಿದೆ ಎಂದು ಆರೋಪಿಸಿದ್ದಾರೆ.  
ಈ ಹಿಂದೆ ಟರ್ಕಿ ವಿರುದ್ಧ ಆರೋಪ ಮಾಡಿದ್ದ ರಷ್ಯಾ ಸಹ ಇಸ್ಲಾಮಿಕ್ ಸ್ಟೇಟ್ ನ ತೈಲ ವ್ಯಾಪಾರದಲ್ಲಿ ಟರ್ಕಿಯ ಅಧ್ಯಕ್ಷ ಹಾಗೂ ಅಧ್ಯಕ್ಷರ ಕುಟುಂಬ ತೊಡಗಿದೆ ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com