
ಪ್ರೇಮಿಗಳ ದಿನಾಚರಣೆಯಂದು ಪ್ರೇಯಸಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿರುವ ಬ್ಲೇಡ್ ರನ್ನರ್ ಖ್ಯಾತಿಯ ಮಾಜಿ ಪ್ಯಾರಾ ಒಲಂಪಿಕ್ ಚಾಂಪಿಯನ್ ಆಸ್ಕರ್ ಪಿಸ್ಟೋರಿಯಸ್ಗೆ ದಕ್ಷಿಣ ಆಫ್ರಿಕಾದ ಸಾಂವಿಧಾನಿಕ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
10,000 ರಾಂಡ್ (690 ಡಾಲರ್) ಬಾಂಡ್ ಪಡೆದು ಪಿಸ್ಟೋರಿಯಸ್ ಅವರನ್ನು ಬಿಡುಗಡೆ ಮಾಡಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು 2016ರ ಏ.16ಕ್ಕೆ ಮುಂದೂಡಲ್ಪಟ್ಟಿದೆ.
ಪಿಸ್ಟೋರಿಯಸ್ ಅವರ ಗೃಹ ಬಂಧನ ಮುಂದುವರೆಯಲಿದೆ. ಹೊರಗೆ ಎಲ್ಲಾದರೂ ಹೋಗಿಬರಲು ಇಚ್ಛಿಸಿದರೆ ವಿಚಾರಣಾ ಅಧಿಕಾರಿಗಳ ಅನುಮತಿ ಪಡೆದು ಹೋಗಿಬರಬಹುದಾಗಿದೆ. ಅವರೆಲ್ಲಾ ಚಲನವಲನದ ಮೇಲೆ ವಿದ್ಯುನ್ಮಾನ ನಿಗಾ ವ್ಯವಸ್ಥೆಯಡಿ ಕಣ್ಗಾವಲು ಇಡಲಾಗುವುದೆಂದು ಸಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರು ತಿಳಿಸಿದ್ದಾರೆ.
Advertisement