ಇಸಿಸ್ ವಿರುದ್ಧ ಹೋರಾಟಕ್ಕೆ ಕ್ರಿಶ್ಚಿಯನ್ ಮಹಿಳಾ ಪಡೆ ಸಜ್ಜು

ತನ್ನ ಇಬ್ಬರು ಮಕ್ಕಳನ್ನು ಹಾಗೂ ಹೇರ್‍ಡ್ರೆಸ್ಸರ್ ಉದ್ಯೋಗವನ್ನು ತೊರೆದು ಬಂದದ್ದಕ್ಕೆ ಬ್ಯಾಬಿಲೋನಿಯಾಗೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹಸಕೆ(ಸಿರಿಯಾ): ತನ್ನ ಇಬ್ಬರು ಮಕ್ಕಳನ್ನು ಹಾಗೂ ಹೇರ್‍ಡ್ರೆಸ್ಸರ್ ಉದ್ಯೋಗವನ್ನು ತೊರೆದು ಬಂದದ್ದಕ್ಕೆ ಬ್ಯಾಬಿಲೋನಿಯಾಗೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲ. ಏಕೆಂದರೆ, ತನ್ನ ಮಕ್ಕಳ ಭವಿಷ್ಯವನ್ನು ಭದ್ರಪಡಿಸಲು, ಸುರಕ್ಷಿತ ನಾಳೆಗಳನ್ನು ಅವರಿಗೆ ನೀಡಲು ತಾನು ಈ ತ್ಯಾಗ ಮಾಡುವುದು ಅನಿವಾರ್ಯ ಎಂದೇ ಆಕೆ ನಂಬಿದ್ದಾಳೆ. 
ಹೌದು, ಸಿರಿಯಾದ ಅಮಾನುಷ ಐಎಸ್ ಉಗ್ರರ ವಿರುದ್ಧ ಸೆಣೆಸುತ್ತಿರುವ `ಟೈಗ್ರಿಸ್-ಯುಪ್ರೆಟಿಸ್ ನಡುವಿನ ಪ್ರದೇಶದ ಮಹಿಳಾ ರಕ್ಷಣಾ ಪಡೆ' ಎಂಬ ಕ್ರಿಶ್ಚಿಯನ್ ಮಹಿಳಾ ಪಡೆಯ ಸದಸ್ಯೆಯಾದ ಬ್ಯಾಬಿಲೋನಿಯಾಳಂತೆಯೆೀ ಹಲವು ಕ್ರಿಶ್ಚಿಯನ್ ಮಹಿಳೆಯರು ಕೂಡ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶಸ್ತ್ರ ಕೈಗೆತ್ತಿಕೊಂಡಿದ್ದಾರೆ. 
ಈವರೆಗೆ ತರಬೇತಾದ ಸುಮಾರು 50 ಮಹಿಳಾ ಹೋರಾಟಗಾರರನ್ನು ಹೊಂದಿರುವ ಈ ಹೊಸ ಪಡೆಯ ತರಬೇತಿ ಶಿಬಿರ ಸದ್ಯ ಅಲ್ ಖ್ವತಾನಿಯಾದಲ್ಲಿದೆ. ಆಗಸ್ಟ್‍ನಲ್ಲಿ ಈ ತಂಡದ ಮೊದಲ ನೇಮಕಾತಿ ನಡೆದಿದ್ದು, ಇದೀಗ ನಿರಂತರ ತರಬೇತಿ ಮುಂದುವರಿದಿದೆ. 
ಜಾಂಬಿಯಾ ಇಸ್ಲಾಮಿಕ್ ಸ್ಟೇಟ್: ಪಶ್ಚಿಮ ಆಫ್ರಿಕಾದಲ್ಲಿನ ಪುಟ್ಟ ದೇಶ ಜಾಂಬಿಯಾವನ್ನು ಇಸ್ಲಾಮಿಕ್ ಸ್ಟೇಟ್ ಎಂದು ಅಲ್ಲಿನ ಅಧ್ಯಕ್ಷ ಯಾಹ್ಯಾ ಜಮ್ಮೇಹ್ ಭಾನುವಾರ ಘೋಷಿಸಿದ್ದಾರೆ. ಜತೆಗೆ, ನಮ್ಮದು ಇಸ್ಲಾಮಿಕ್ ಸ್ಟೇಟ್ ಆದರೂ, ಅಲ್ಪಸಂಖ್ಯಾತರೆಲ್ಲರಿಗೂ ಸಮಾನ ಗೌರವ ನೀಡಲಾಗುವುದು ಎಂದೂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com