ಬಾಂಬ್ ತಂದಿರುವೆ ಎಂದು ಮುಸ್ಲಿಂ ವಿದ್ಯಾರ್ಥಿನಿಯನ್ನು ಪ್ರಶ್ನಿಸಿದ ಶಿಕ್ಷಕಿ

ಇಸ್ಲಾಮಿಕ್ ಸ್ಟೇಟ್ ಉಗ್ರರ ದುಷ್ಕೃತ್ಯಗಳು ಜನರ ಮನಸ್ಸಿನಲ್ಲಿ ಎಷ್ಟರ ಮಟ್ಟಿಗೆ ಭೀತಿ ಸೃಷ್ಠಿಸಿದೆ ಎಂದರೆ ಅಮೆರಿಕಾದ ಅಟ್ಲಾಂಟದ ಜಾರ್ಜಿಯಾದಲ್ಲಿರುವ ಶಿಲೋ ಮಧ್ಯಮ...
ಮುಸ್ಲಿಂ ವಿದ್ಯಾರ್ಥಿನಿ
ಮುಸ್ಲಿಂ ವಿದ್ಯಾರ್ಥಿನಿ
ಅಟ್ಲಾಂಟ: ಇಸ್ಲಾಮಿಕ್ ಸ್ಟೇಟ್ ಉಗ್ರರ ದುಷ್ಕೃತ್ಯಗಳು ಜನರ ಮನಸ್ಸಿನಲ್ಲಿ ಎಷ್ಟರ ಮಟ್ಟಿಗೆ ಭೀತಿ ಸೃಷ್ಠಿಸಿದೆ ಎಂದರೆ ಅಮೆರಿಕಾದ ಅಟ್ಲಾಂಟದ ಜಾರ್ಜಿಯಾದಲ್ಲಿರುವ ಶಿಲೋ ಮಧ್ಯಮ ಶಾಲೆಯ ಶಿಕ್ಷಕಿಯೊಬ್ಬರು 13 ವರ್ಷದ ಮುಸ್ಲಿಂ ವಿದ್ಯಾರ್ಥಿನಿಯನ್ನು ನಿಲ್ಲಿಸಿ ಬಾಂಬ್ ತಂದಿರುವೆಯ ಎಂದು ಪ್ರಶ್ನಿಸಿದ್ದಾರೆ. 
ಬಾಂಬ್ ತಂದಿರುವೆಯ ಎಂದು ಶಿಕ್ಷಕಿ ತಮ್ಮ ಮಗಳನ್ನು ಪ್ರಶ್ನಿಸಿರುವ ಬಗ್ಗೆ ವಿದ್ಯಾರ್ಥಿನಿ ತಂದೆ ಅಬ್ದಿರಿಜಕ್ ಆಡೆನ್ ಬೇಸರ ವ್ಯಕ್ತಪಡಿಸಿದ್ದಾರೆ. 
ತಮ್ಮ 13 ವರ್ಷದ ಮಗಳು ತಲೆಗೆ ಸ್ಕಾರ್ಫ್ ಧರಿಸಿದ್ದರಿಂದ ಶಿಕ್ಷಕಿಯೊಬ್ಬರು ಆಕೆಯನ್ನು ನಿಲ್ಲಿಸಿ ಬಾಂಬ್ ತಂದಿರುವ ಎಂದು ಪ್ರಶ್ನಿಸಿದ್ದಾರೆ. ಇದರಿಂದ ತಮ್ಮ ಮಗಳು ತುಂಬಾ ನೊಂದುಕೊಂಡಿರುವುದಾಗಿ ಚಾಲಕನಾಗಿರುವ ಆಡೆನ್ ಹೇಳಿದ್ದಾರೆ. 
ಮುಸ್ಲಿಂ ಆಗಿರುವ ನಾವು ಆಫ್ರಿಕಾ ಮೂಲದವರು. ಸದ್ಯ ಅಮೆರಿಕದಲ್ಲಿ ವಾಸವಾಗಿದ್ದೇವೆ. ನಾವು ನಮ್ಮ ಮಕ್ಕಳಿಗೆ ಜನರನ್ನು ದ್ವೇಷಿಸುವಂತೆ ಹೇಳಿಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಶಿಕ್ಷಕಿಯ ವರ್ತನೆ ತಿಳಿಯುತ್ತಿದ್ದಂತೆ ಶಾಲೆಯ ಪ್ರಿನ್ಸಿಪಲ್ ವಿದ್ಯಾರ್ಥಿನಿಯ ಪೋಷಕರಲ್ಲಿ ಕ್ಷಮೆಯಾಚಿಸಿರುವುದಾಗಿ ಗ್ವಿನ್ನೆಟ್ ಕೌಂಟಿ ಪಬ್ಲಿಕ್ ಶಾಲೆಯ ವಕ್ತಾರ ಸ್ಲೋನ್ ರೋಚ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com