ವಾಟ್ಸಪ್
ವಿದೇಶ
ಬ್ರೆಜಿಲ್‍ನಲ್ಲಿ ವಾಟ್ಸಪ್‌ಗೆ 48 ಗಂಟೆ ನಿಷೇಧ
ಕ್ರಿಮಿನಲ್ ತನಿಖೆಗೆ ಸಂಬಂಧಿಸಿದಂತೆ ವಾಟ್ಸ್ ಆಪ್ ಕಂಪನಿಯು ತನಿಖಾಧಿಕಾರಿಗಳಿಗೆ ಸಹಕರಿಸದ ಹಿನ್ನೆಲೆಯಲ್ಲಿ ದೇಶಾದಾದ್ಯಂತ 48 ಗಂಟೆಗಳ ಕಾಲ ನಿಷೇಧ ಹೇರಿದೆ...
ಬ್ರೆಜಿಲ್: ಕ್ರಿಮಿನಲ್ ತನಿಖೆಗೆ ಸಂಬಂಧಿಸಿದಂತೆ ವಾಟ್ಸ್ ಆಪ್ ಕಂಪನಿಯು ತನಿಖಾಧಿಕಾರಿಗಳಿಗೆ ಸಹಕರಿಸದ ಹಿನ್ನೆಲೆಯಲ್ಲಿ ದೇಶಾದಾದ್ಯಂತ 48 ಗಂಟೆಗಳ ಕಾಲ ನಿಷೇಧ ಹೇರಿದೆ.
ಅಕ್ರಮ ಡ್ರಗ್ಸ್ ಸಾಗಾಟಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಆರೋಪಿಗಳ ವಾಟ್ಸಪ್ ಸಂದೇಶವನ್ನು ಪಡೆಯಲು ವಿಫಲವಾಗಿರುವ ಹಿನ್ನೆಲೆಯಲ್ಲಿ ವಾಟ್ಸಪ್ ಮೆಸೆಂಜರ್ ಗೆ ಎರಡು ದಿನಗಳ ಕಾಲ ನಿಷೇಧ ಹೇರುವಂತೆ ಬ್ರೆಜಿಲ್ ನ್ಯಾಯಾಲಯ ಮೊಬೈಲ್ ಕಂಪನಿಗಳಿಗೆ ಆದೇಶಿಸಿದೆ.
ಬ್ರೆಜಿಲ್ ನಲ್ಲಿ ಸುಮಾರು 93 ಮಿಲಿಯನ್ ವಾಟ್ಸಪ್ ಬಳಕೆದಾರರಿದ್ದು, ನ್ಯಾಯಾಲಯದ ಆದೇಶವನ್ನು ಮೊಬೈಲ್ ಕಂಪನಿಗಳು ಪಾಲಿಸಲಿವೆಯೇ ಎಂಬುದು ಸ್ಪಷ್ಟಗೊಂಡಿಲ್ಲ.
ಅಮೆರಿಕನ್ನರಿಗಿಂತ ಬ್ರೆಜಿಲ್ ನಾಗರಿಕರು ಎರಡು ಪಟ್ಟು ಸಮಯವನ್ನು ಸಾಮಾಜಿಕ ತಾಣಗಳಲ್ಲಿ ಕಳೆಯುತ್ತಾರೆ. ಹೀಗಿರುವಾಗ ನ್ಯಾಯಾಲಯದ ಆದೇಶ ತೀವ್ರ ನಿರಾಶೆ ಉಂಟುಮಾಡಿದೆ ಎಂದು ವಾಟ್ಸಪ್ ಮುಖ್ಯ ಕಾರ್ಯನಿರ್ವಾಹಕ ಜಾನ್ ಕೌಮ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ