ಅಮೆರಿಕದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಪ್ರಕರಣಗಳು ಶೇ.300 ರಷ್ಟು ಹೆಚ್ಚಳ

ಕ್ಯಾಲಿಫೋರ್ನಿಯಾ ಮತ್ತು ಪ್ಯಾರಿಸ್ ನಲ್ಲಿ ನಡೆದ ಉಗ್ರರ ದಾಳಿಗಳ ನಂತರ ಅಮೆರಿಕನ್‌ ಮುಸ್ಲಿಮರು ಹಾಗೂ ಮಸೀದಿಗಳ ಮೇಲೆ ದ್ವೇಷದ ದಾಳಿ ಪ್ರಕರಣಗಳು ಹೆಚ್ಚಾಗಿವೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್‌:  ಕ್ಯಾಲಿಫೋರ್ನಿಯಾ ಮತ್ತು ಪ್ಯಾರಿಸ್ ನಲ್ಲಿ ನಡೆದ ಉಗ್ರರ ದಾಳಿಗಳ ನಂತರ ಅಮೆರಿಕನ್‌ ಮುಸ್ಲಿಮರು ಹಾಗೂ ಮಸೀದಿಗಳ ಮೇಲೆ ದ್ವೇಷದ ದಾಳಿ ಪ್ರಕರಣಗಳು ಹೆಚ್ಚಾಗಿವೆ ಎಂದು ವರದಿ ತಿಳಿಸಿದೆ.

ಒಂದು ತಿಂಗಳಲ್ಲಿ ಇಂಥ ದ್ವೇಷ ಪ್ರಕರಣಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದ್ದು, ತಿಂಗಳೊಂದರಲ್ಲಿ ಡಜನ್‌ಗೂ ಅಧಿಕ ಘಟನೆಗಳು ವರದಿಯಾಗಿವೆ ಎನ್ನಲಾಗಿದೆ.

ಮಸೀದಿಗಳ ಮೇಲಿನ ದಾಳಿ, ಮುಸ್ಲಿಂ ಉದ್ಯಮಿಗಳಿಗೆ ಪ್ರಾಣ ಬೆದರಿಕೆ ಕರೆಗಳು, ಗುಂಡಿನ ದಾಳಿ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ಕ್ಯಾಲಿಫೋರ್ನಿಯಾ ರಾಜ್ಯ ವಿಶ್ವವಿದ್ಯಾಲಯ ಸಂಶೋಧಕರ ತಂಡ ನಡೆಸಿದ ಸಮೀಕ್ಷೆ ತಿಳಿಸಿದೆ.

ಕ್ಯಾಲಿಫೋರ್ನಿಯಾದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧದ ಮೇಲೆ ನಡೆಸಲಾಗುತ್ತಿರುವ ದಾಳಿಗಳ ಬಗ್ಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ನಾಗರಿಕ ಹಕ್ಕುಗಳ ನಾಯಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹೀಗಿದ್ದರೂ ದಾಳಿ ಕೋರರು  ಕ್ಯಾರೇ ಅನ್ನುತ್ತಿಲ್ಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com