ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಕ್‌ನಲ್ಲಿರುವ ಹಿಂದೂಗಳಿಂದ ಪ್ರವಾದಿಗೆ ನಮನ, ಇಸ್ಲಾಂ ಧರ್ಮ ಪ್ರಚಾರ

ಪಾಕಿಸ್ತಾನದ ಪೇಶಾವರ ಪ್ರದೇಶದಲ್ಲಿರುವ ಹಿಂದೂ ಅಲ್ಪ ಸಂಖ್ಯಾತರು ಇಸ್ಲಾಂ ಧರ್ಮದ ಪ್ರಚಾರ ನಡೆಸುವ ಸಲುವಾಗಿ ಡಿಸೆಂಬರ್ 24ರಂದು...
ನವದೆಹಲಿ: ಪಾಕಿಸ್ತಾನದ ಪೇಶಾವರ ಪ್ರದೇಶದಲ್ಲಿರುವ ಹಿಂದೂ ಅಲ್ಪ ಸಂಖ್ಯಾತರು ಇಸ್ಲಾಂ ಧರ್ಮದ ಪ್ರಚಾರ ನಡೆಸುವ ಸಲುವಾಗಿ ಡಿಸೆಂಬರ್ 24ರಂದು ಸಭೆ ಸೇರಲು ತೀರ್ಮಾನಿಸಿದ್ದಾರೆ. ಪ್ರವಾದಿ ಮೊಹಮ್ಮದ್‌ಗೆ ನಮನ ಸಲ್ಲಿಸಲು ಮತ್ತು ಇಸ್ಲಾಂ ಧರ್ಮ ಶಾಂತಿಯುತವಾದದ್ದು ಎಂಬ ಸಂದೇಶವನ್ನು ಪಸರಿಸುವುದೇ ಈ ಸಭೆಯ ಉದ್ದೇಶವಾಗಿದೆ.
ಈ ಬಗ್ಗೆ ದ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆಯೊಂದಿಗೆ ಮಾತನಾಡಿದ ಅಖಿಲ ಪಾಕಿಸ್ತಾನ ಹಿಂದೂ ಹಕ್ಕುಗಳ ಚಳುವಳಿ ಅಧ್ಯಕ್ಷ ಹರೂನ್ ಸರ್‌ಬ್ದಿಯಾಲ್, ಇಸ್ಲಾಂ ಧರ್ಮ ಶಾಂತಿಯಿಂದ ಕೂಡಿದ ಧರ್ಮವಾಗಿದೆ ಎಂಬುದನ್ನು ಜಗತ್ತಿಗೇ ಸಾರಲು ನಾವು ಈ ಸಭೆ ಆಯೋಜಿಸಿದ್ದೇವೆ ಎಂದಿದ್ದಾರೆ.
ಎಲ್ಲ ಪ್ರದೇಶಗಳ ಜನರು, ಸಾಮಾಜಿಕ ಕಾರ್ಯಕರ್ತರು,  ರಾಜಕೀಯ ಪಕ್ಷಗಳು ಈ ಸಭೆಯಲ್ಲಿ  ಭಾಗವಹಿಸಬೇಕೆಂದು ಸರ್‌ಬ್ದಿಯಾಲ್ ಕರೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿರುವ ಅಲ್ಪ ಸಂಖ್ಯಾತರಿಗೆ ಮಾತ್ರ ಧರ್ಮಾಂಧರ ಸಮಸ್ಯೆ ಇರುತ್ತದೆ ಎಂದಲ್ಲ, ಅದೊಂಥರಾ ಜಾಗತಿಕ ಸಮಸ್ಯೆಯಾಗಿದೆ. ಆದ್ದರಿಂದ ಆ ರೀತಿಯ ನಿಲುವುಗಳನ್ನು ತೊಡೆದು ಹಾಕಿ ಜಾಗತಿಕ ಮಟ್ಟದಲ್ಲಿ ಒಳ್ಳೆಯತನವನ್ನು ಹರಡಬೇಕಿದೆ ಎಂದು ಸರ್‌ಬ್ದಿಯಾಲ್ ಹೇಳಿರುವುದನ್ನು ಪತ್ರಿಕೆ ಉಲ್ಲೇಖಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com