ಪುರುಷನ ಪಾಸ್ ಪೋರ್ಟ್ ಹೊಂದಿದ್ದರೂ ಮಹಿಳೆಗೆ ಪ್ರಯಾಣಕ್ಕೆ ಅನುಮತಿ: ಪಿಐಎ ಗೆ ದಂಡ

ಪುರುಷನ ಪಾಸ್ ಪೋರ್ಟ್ ಬಳಸಿ ಪ್ರಯಾಣ ಮಾಡಲು ಮಹಿಳೆಯೊಬ್ಬರಿಗೆ ಅವಕಾಶ ನೀಡಿದ ಪಾಕಿಸ್ತಾನ ಅಂತಾರಾಷ್ಟ್ರೀಯ ಏರ್ಲೈನ್ಸ್ ಗೆ (ಯುಎಇ) ವಲಸೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಪಿಐಎ
ಪಿಐಎ

ದುಬೈ: ಪುರುಷನ ಪಾಸ್ ಪೋರ್ಟ್ ಬಳಸಿ ಪ್ರಯಾಣ ಮಾಡಲು ಮಹಿಳೆಯೊಬ್ಬರಿಗೆ ಅವಕಾಶ ನೀಡಿದ ಪಾಕಿಸ್ತಾನ ಅಂತಾರಾಷ್ಟ್ರೀಯ ಏರ್ಲೈನ್ಸ್ ಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಬ್ರಿಟೀಶ್ ಪಾಸ್ ಪೋರ್ಟ್ ಹೊಂದಿದ್ದ ಸಿದ್ಧಿಕಿ ಎಂಬ ಮಹಿಳೆ ಡಿ.16 ರಂದು ಪಿಐಎ ವಿಮಾನದಲ್ಲಿ ದುಬೈ ಗೆ ತೆರಳಿದ್ದರು. ಪುರುಷನ ಪಾಸ್ಪೋರ್ಟ್ ಹೊಂದಿದ್ದರಿಂದ ಸಿದ್ಧಿಕಿಯನ್ನು ಯುಎಇ ಅಧಿಕಾರಿಗಳು ಆಕೆಯನ್ನು ಪಾಕಿಸ್ತಾನಕ್ಕೆ ವಾಪಸ್ ಕಳಿಸಿದ್ದಾರೆ. ಸಿದ್ಧಿಕಿ ತನ್ನ ಪಾಸ್ಪೋರ್ಟ್ ಕೊಂಡೊಯ್ಯುವ ಬದಲು ತನ್ನ ಮಗನ ಪಾಸ್ಪೋರ್ಟ್ ತೆಗೆದುಕೊಂಡು ಹೋಗಿದ್ದರು. ಅನ್ಯರ ಪಾಸ್ ಪೋರ್ಟ್ ಹೊಂದಿದ್ದರೂ ಬೋರ್ಡಿಂಗ್ ಕಾರ್ಡ್ ನೀಡಿದ್ದ ಪಿಐಎ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು ದಂಡ ವಿಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com