ಪಾಕ್ ಪತ್ರಿಕೆಗಳ ಭವ್ಯ ಸ್ವಾಗತ

ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚರಿಯ, ದಿಢೀರ್ ಪ್ರವಾಸವನ್ನು ಪಾಕಿಸ್ತಾನ ಪತ್ರಿಕೆಗಳು ಸ್ವಾಗತಿಸಿವೆ. ಶುಕ್ರವಾರ ಪಾಕಿಸ್ತಾನ...
ನವಾಜ್ ಷರೀಫ್ -ನರೇಂದ್ರ ಮೋದಿ
ನವಾಜ್ ಷರೀಫ್ -ನರೇಂದ್ರ ಮೋದಿ
ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚರಿಯ, ದಿಢೀರ್ ಪ್ರವಾಸವನ್ನು ಪಾಕಿಸ್ತಾನ ಪತ್ರಿಕೆಗಳು ಸ್ವಾಗತಿಸಿವೆ. ಶುಕ್ರವಾರ ಪಾಕಿಸ್ತಾನ ಪತ್ರಿಕೆಗಳಿಗೆ ರಜೆ ಇದ್ದುದರಿಂದ ಭಾನುವಾರದ ಸಂಚಿಕೆಯಲ್ಲಿ ಮೋದಿ ಪ್ರವಾಸದ ಕುರಿತು ಸುದ್ದಿ ಪ್ರಕಟಿಸಿವೆ. 
ಅಲ್ಲಿನ ಟಿವಿಗಳಲ್ಲಿ, ವೆಬ್‍ಸೈಟ್ ಗಳಲ್ಲಿ ಈ ಪ್ರವಾಸ ಭಾರಿಯಾಗಿಯೇ ಸುದ್ದಿ ಮಾಡಿದ್ದರೂ, ಸಹ ಮತ್ತೆ ಅದೇ ಸುದ್ದಿಯನ್ನೇ ಪತ್ರಿಕೆಗಳು ಪ್ರಮುಖ ಸುದ್ದಿಯಾಗಿ ಮಾಡಿಕೊಂಡಿವೆ. 
ಡಾನ್, ದಿ ಎಕ್ಸ್‍ಪ್ರೆಸ್ ಟ್ರಿಬ್ಯೂನ್, ದಿ ನ್ಯೂಸ್, ಪಾಕಿಸ್ತಾನ ಅಬ್ಸರ್ವರ್, ಜಂಗ್, ನಯೀ ದುನಿಯಾ, ಡೈಲಿ ಟೈಮ್ಸ್, ಡೈಲಿ ಜಹಾನ್ ಪಾಕಿಸ್ತಾನ್ ಸೇರಿದಂತೆ ಎಲ್ಲ ಪ್ರಮುಖ ಪತ್ರಿಕೆಗಳು ಮೋದಿಷರೀಫ್ ಭೇಟಿಯನ್ನೇ ಚೆನ್ನಾಗಿ ಬಳಸಿಕೊಂಡಿವೆ. 
ಆದರೆ ಈ ದಿಢೀರ್ ಭೇಟಿಯ ಹಿಂದಿನ ಉದ್ದೇಶ, ಮುಂದಿನ ಸಾರ್ಥಕತೆ, ಯಾರು ಕಾರಣ ಎಂಬ ಬಗ್ಗೆಯೂ ಈ ಪತ್ರಿಕೆಗಳು ವಿಶ್ಲೇಷಣೆ ನಡೆಸಿವೆ. ಅಲ್ಲದೆ ಜ.15ರ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಬಗ್ಗೆಯೂ ವಿವರವಾಗಿ ಸುದ್ದಿ ಪ್ರಕಟಿಸಿವೆ. 
ಹೆಚ್ಚಿನ ಪತ್ರಿಕೆಗಳು ಮೋದಿ ಮತ್ತು ಷರೀಫ್ ನಡೆಯನ್ನು ಸ್ವಾಗತಿಸಿವೆ. ಡಾನ್ ಪತ್ರಿಕೆ ವಿಶ್ಲೇಷಣೆ, ಸಂಪಾದಕೀಯ ಬರೆ ದಿದ್ದು, ಈ ಭೇಟಿ ಸ್ವಾಗತಾರ್ಹ ಎಂದಿದೆ. ಆದರೆ ದಿಢೀರನೆ ಇಂಥ ಪ್ರವಾಸ ಸಜ್ಜಾಗಿದ್ದು ಹೇಗೆ ಎಂಬ ಕುರಿತಂತೆ ಒಂದು ವಿಶ್ಲೇಷಣೆ ಮಾಡಿದೆ. ಅಲ್ಲದೆ ಕೆಲವೊಂದು ಉತ್ತರಿಸಲಾರದ ಪ್ರಶ್ನೆಗಳ ಬಗ್ಗೆಯೂ ಪ್ರಸ್ತಾಪಿಸಿದೆ. 
ರಿವಿಂಡಿಯಲ್ಲಿ ಶುಕ್ರವಾರ ಬೆಳಗ್ಗೆಯಿಂ ದಲೇ ಸ್ಪೆಷಲ್ ವಿಐಪಿಯೊಬ್ಬರ ಆಗಮ ನಕ್ಕಾಗಿ ಸಿದ್ಧತೆ ನಡೆಯುತ್ತಿತ್ತು. ಈ ಬಗ್ಗೆ ಅಲ್ಲಿನ ನೌಕರರಿಗೆ ಹೇಳಲಾಗಿತ್ತು. ಆದರೆ ಸ್ಪೆಷಲ್ ವಿಐಪಿ ಯಾರು ಎಂಬ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಆದರೆ ಮಧ್ಯಾಹ್ನದ ಹೊತ್ತಿಗೆ ಸ್ಪೆಷಲ್ ವಿಐಪಿಯ ಹೆಸರು ಗೊತ್ತಾಯಿತು. ಅಂದರೆ, ಮೋದಿ ಅವರನ್ನು ದಿಢೀರ್ ಭೇಟಿಯಲ್ಲ, ಹಿಂದೆಯೇ ರೂಪಿತವಾಗಿದ್ದ ಭೇಟಿಯಲ್ಲವೇ ಎಂದು ಪ್ರಶ್ನಿಸಿದೆ. ಇದರ ಜತೆಯಲ್ಲೇ ಭಾರತದ ವಿದೇ ಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಷರೀಫ್ ಅವರಿಗೆ ಮೋದಿ ಭೇಟಿಯ ಬಗ್ಗೆ ಸುಳಿವು ನೀಡಿದ್ದರು. 
ನನ್ನ ಕಡೆಯಿಂದ ಶಾಂತಿ, ಸೌಹಾರ್ದತೆಗೆ ಎಲ್ಲ ಪ್ರಯತ್ನ ಮಾಡಿದ್ದೇನೆ. ಇನ್ನೇನಿದ್ದರೂ ನವಾಜ್ ಷರೀಫ್  ಅವರ ಕಡೆಯಿಂದಲೇ ಆಗ ಬೇಕು. ಅವರೇ ಸಿಹಿ ಸುದ್ದಿ ಕೊಡಬೇಕು ಎಂದು ಸುಷ್ಮಾ ಷರೀಫ್ ತಾಯಿಗೆ ಭರವಸೆ ನೀಡಿ ಬಂದಿದ್ದರು ಎಂದೂ ಬರೆದುಕೊಳ್ಳ ಲಾಗಿದೆ. ಅಲ್ಲಿಗೆ ಸುಷ್ಮಾ ಸ್ವರಾಜ್ ಪಾಕಿ ಸ್ತಾನಕ್ಕೆ ಬಂದಾಗಲೇ ಮೋದಿ ಭೇಟಿ ಫಿಕ್ಸ್ ಆಗಿತ್ತಲ್ಲವೇ ಎಂದು ಪ್ರಶ್ನಿಸಿದೆ. ಇದರ ಜತೆಯಲ್ಲೇ ಸಜ್ಜನ್ ಜಿಂದಾಲ್ ಅವರ ಪಾಕಿಸ್ತಾನ ಭೇಟಿ ಮತ್ತು ಮೋದಿ ಷರೀಫ್ ಜತೆಗಿನ ಜಿಂದಾಲ್ ಸ್ನೇಹದ ಬಗ್ಗೆ ಪ್ರಸ್ತಾಪಿಸಿರುವ ಡಾನ್ ಪತ್ರಿಕೆ, ಇದು ಉದ್ಯಮಿಯೊಬ್ಬರ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯೇ ಎಂದು ಪ್ರಶ್ನಿಸಿದೆ. 
ಇದರ ಜತೆಯಲ್ಲೇ ಪತ್ರಕರ್ತೆ ಬರ್ಖಾ ದತ್ ಅವರ ಪುಸ್ತಕವನ್ನೂ ಪ್ರಸ್ತಾಪಿಸಿದೆ. ಇದೇ ಪತ್ರಿಕೆಯಲ್ಲಿ ಕೆಲ ಓದುಗರೂ ಮೋದಿ ಭೇಟಿಯನ್ನು ಸ್ವಾಗತಿಸಿದ್ದು, ಎರಡೂ ದೇಶಗಳ ನóಡುವಿನ ಓಡಾಟಕ್ಕೆ ಸುಲಭ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿದ್ದಾರೆ. ದಿ ನೇಷನ್ ಪತ್ರಿಕೆ ಸಜ್ಜನ್ ಜಿಂದಾಲ್ ಅವರ ಬಗ್ಗೆ ವಿಶೇಷ ಲೇಖವನೊಂದನ್ನು ಪ್ರಕಟಿಸಿದೆ. ಜತೆಗೆ ಇಸ್ಲಾಮಾಬಾದ್‍ನಿಂದ ಲಾಹೋರ್‍ಗೆ ಭಾರತೀಯ ಹೈಕಮಿಷನರ್ ಕಚೇರಿಯ ಸಿಬ್ಬಂದಿ ಬಂದ ಬಗೆಯನ್ನೂ ಅದು ವಿವರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com