ದುಬೈ: ಇಲ್ಲಿನ ಬುರ್ಜ್ ಖಲೀಫಾದ ವೀಕ್ಷಣಾ ಣ ಈ ವರ್ಷದ ಜಗತ್ತಿನ ಅತ್ಯುತ್ತಮ ಆಕರ್ಷಕ ತಾಣವಾಗಿ ಹೊರಹೊಮ್ಮಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುರಿತು ಸಮೀಕ್ಷೆ ನಡೆಸಿದ್ದು ಬುರ್ಜ್ ಖಲೀಫಾದ ವೀಕ್ಷಣಾ ಡೆಕ್ ಡಿಸ್ನಿವಲ್ರ್ಡ್‍ನ `ಮ್ಯಾಜಿಕ್ ಕಿಂಗ್‍ಡಂ' ಮತ್ತು ಬ್ರಿಟನ್‍ನ `ಲಂಡನ್ ಐ'ನ್ನು ಹಿಂದಿಕ್ಕಿದೆ. ಅಟ್ರಾಕ್ಷನ್ ಸಂಸ್ಥೆ ಈ ಮತದಾನ ನಡೆಸಿತ್ತು.
ಉತ್ತಮ ಅಬ್ಸರ್ವೇಷನ್ ಡೆಕ್ ಗುಂಪಿನಲ್ಲಿ ದಿ ಎಂಪೈರ್ ಸ್ಟೇಟ್ ಬಿಲ್ಡಿಂಗ್ ನಂತರ ಎರಡನೇ ತಾಣವಾಗಿಯೂ ಇಲ್ಲಿನ ಡೆಕ್ ಹೊರಹೊಮ್ಮಿದೆ. ಈ ಕಟ್ಟಡ ಈಗ ಜಗತ್ತಿನಲ್ಲೇ ಅತ್ಯಂತ ಆಕರ್ಷಕ ಸ್ಥಳವಾಗಿ ಮೂಡುತ್ತಿದೆ ಎಂದು ಸಮೀಕ್ಷೆ ಹೇಳಿದೆ.