ಸಿರಿಯಾ ಮೇಲೆ ರಷ್ಯಾ ದಾಳಿ: ಎರಡು ಸಾವಿರ ಮಂದಿ ಬಲಿ

ಸಿರಿಯಾದ ಅಧ್ಯಕ್ಷ ಬಷಾರ್ ಅಲ್ ಅಸಾದ್ ಪರ ಸೇನಾ ಕಾರ್ಯಾಚರಣೆ ಆರಂಭಿಸಿರುವ ರಷ್ಯಾ 3 ತಿಂಗಳಲ್ಲಿ 2300ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿದೆ...
ರಷ್ಯಾ ಸೇನೆ
ರಷ್ಯಾ ಸೇನೆ
Updated on

ಬೈರೂತ್: ಸಿರಿಯಾದ ಅಧ್ಯಕ್ಷ ಬಷಾರ್ ಅಲ್ ಅಸಾದ್ ಪರ ಸೇನಾ ಕಾರ್ಯಾಚರಣೆ ಆರಂಭಿಸಿರುವ ರಷ್ಯಾ 3 ತಿಂಗಳಲ್ಲಿ 2300ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿದೆ. ಇದರಲ್ಲಿ ಮೂರನೇ ಒಂದು ಭಾಗದಷ್ಟು ಇದರಲ್ಲಿ ಮೂರನೇ ಒಂದು ಭಾಗದಷ್ಟು ನಾಗರಿಕರಿದ್ದಾರೆ ಎಂದು ಮಾನವ ಹಕ್ಕು ಸಂಘಟನೆಯೊಂದು ಆರೋಪಿಸಿದೆ.

ಅಸಾದ್ ವಿರುದ್ಧ ಬಂಡೆದ್ದಿರುವ ವಿರೋಧಿ ಗುಂಪುಗಳು ಹಾಗೂ ಐಎಸ್ ಉಗ್ರರ ವಿರುದ್ಧ ಕಳೆದ ಸೆ.30ರಂದು ರಷ್ಯಾ ಸಿರಿಯಾದಲ್ಲಿ ವೈಮಾನಿಕ ದಾಳಿ ಆರಂಭಿಸಿತ್ತು. 3 ತಿಂಗಳ ಅವಧಿಯಲ್ಲಿ ಈವರೆಗೆ ರಷ್ಯಾ ದಾಳಿಗೆ ಒಟ್ಟು 2371 ಮಂದಿ ಜೀವ ತೆತ್ತಿದ್ದಾರೆ. ಆ ಪೈಕಿ, 180 ಮಕ್ಕಳೂ ಸೇರಿದಂತೆ 792 ಮಂದಿ ನಾಗರಿಕರು ಬಲಿಯಾಗಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕು ಉಲ್ಲಂಘನೆ ವೀಕ್ಷಕ ಸಂಘಟನೆ ಹೇಳಿದೆ. ಐಎಸ್ ಉಗ್ರ ಸಂಘಟನೆಯ 655 ಉಗ್ರರು ಈ ದಾಳಿಯಲ್ಲಿ ಹತ್ಯೆಯಾಗಿದ್ದಾರೆ.

ಅಲ್ಲದೆ, ಇತರ ಬಂಡುಕೋರ ಸಂಘಟನೆಗಳ 924 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಬ್ರಿಟನ್ ಮೂಲದ ಮಾನವ ಹಕ್ಕುಗಳ ಸಂಘಟನೆ ಹೇಳಿದೆ. ರಷ್ಯಾ ವೈಮಾನಿಕ ದಾಳಿ ಆರಂಭಿಸಿದ ದಿನದಿಂದಲೂ ದಾಳಿಗೆ ನಾಗರಿಕರು ಬಲಿಯಾಗುತ್ತಿರುವ ಬಗ್ಗೆ ಐರೋಪ್ಯ ಸಮುದಾಯ  ಗೂ ಟರ್ಕಿ, ಸೌಧಿ ಅರೇಬಿಯಾಮತ್ತಿತರ ಮಧ್ಯಪ್ರಾಚ್ಯ ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಕಳೆದ ವಾರವಷ್ಟೇ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ಕೂಡ ರಷ್ಯಾ ದಾಳಿಯಿಂದಾಗಿ ಅಪಾರ ಪ್ರಮಾಣದ ನಾಗರಿಕರ ಸಾವು ಸಂಭವಿಸುತ್ತಿದ್ದು, ಇದುಯುದ್ಧ ಅಪರಾಧಗಳಿಗೆ ದಾರಿಯಾಗಲಿದೆ ಎಂದು ಎಚ್ಚರಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com