22 ಬಿಲಿಯನ್ ವರ್ಷಗಳ ನಂತರ ಮಹಾಸ್ಫೋಟದಿಂದ ಜಗತ್ತು ನಿರ್ನಾಮ?

ಪ್ರತೀ ಹುಟ್ಟಿನ ಜತೆ ಸಾವು ಎಂಬುದು ಇದ್ದೇ ಇದೆ. ಅದೇ ರೀತಿ ಒಂದಲ್ಲ ಒಂದು ದಿನ ಈ ಜಗತ್ತು ಕೂಡಾ ಸ್ಫೋಟಗೊಂಡು ನಾಶವಾಗುತ್ತದೆ ...
ಮಹಾಸ್ಫೋಟ  (ಸಾಂಕೇತಿಕ ಚಿತ್ರ)
ಮಹಾಸ್ಫೋಟ (ಸಾಂಕೇತಿಕ ಚಿತ್ರ)

ನ್ಯೂಯಾರ್ಕ್: ಪ್ರತೀ ಹುಟ್ಟಿನ ಜತೆ  ಸಾವು ಎಂಬುದು ಇದ್ದೇ ಇದೆ. ಅದೇ ರೀತಿ ಒಂದಲ್ಲ ಒಂದು ದಿನ ಈ ಜಗತ್ತು ಕೂಡಾ ಸ್ಫೋಟಗೊಂಡು ನಾಶವಾಗುತ್ತದೆ ಎಂದು ವಿಜ್ಞಾನಿಗಳ
ತಂಡವೊಂದು ಹೇಳಿದೆ . ಆದರೆ ಹೀಗೊಂದು ಸ್ಫೋಟ ಅಷ್ಟೊಂದು ಬೇಗ ನಡೆಯುವುದಿಲ್ಲ. ಸರಿಸುಮಾರು 22 ಬಿಲಿಯನ್ ವರ್ಷಗಳ ವರೆಗೆ ನಾವು ವಾಸಿಸುವ ಭೂಮಿಗೆ ಏನೂ ಅಪಾಯ ಸಂಭವಿಸುವುದಿಲ್ಲ. ಇದಾದ ನಂತರ ಪ್ರಳಯ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಬಾಹ್ಯಾಕಾಶದಲ್ಲಿರುವ ಗ್ರಹಗಳು, ನಕ್ಷತ್ರಗಳು, ಭೂಮಿಯಲ್ಲಿರುವ ಮನುಷ್ಯ, ಸಸ್ಯ, ಪ್ರಾಣಿಗಳೆಲ್ಲವೂ ಈ ಸ್ಫೋಟದಲ್ಲಿ ನಾಶಗೊಳ್ಳಲಿವೆ. ಈಗಾಗಲೇ ಪ್ರಪಂಚದಲ್ಲಿ ಗ್ರಹಗಳು ಆಗ್ಗಾಗ್ಗೆ ಸ್ಫೋಟಗೊಳ್ಳುತ್ತಿರುತ್ತವೆ. ಈ ಬದಲಾವಣೆಗಳು ಮಹಾಸ್ಫೋಟಕ್ಕೆ ಮುನ್ನುಡಿಯಾಗಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಮಹಾಸ್ಫೋಟದಲ್ಲಿ ಭೂಮಿ ಸ್ಫೋಟಗೊಂಡು ಪುಡಿ ಪುಡಿಯಾಗುತ್ತದೆ ಎಂದು ವಾನ್ಡೇರ್ ಬಿಲ್ಟ್ ವಿಶ್ವವಿದ್ಯಾಲಯದ ಡಾ. ಮಾರ್ಸೊಲೋ ಡಿಸ್ಕೋನ್ಸಿ ಎಂಬವರ ನೇತೃತ್ವದ ವಿಜ್ಞಾನಿಗಳ ತಂಡ ಅಭಿಪ್ರಾಯಪಟ್ಟಿದೆ. ಪ್ರತಿ ನಿಮಿಷವೂ ಪ್ರಪಂಚದ ವೇಗ ಜಾಸ್ತಿಯಾಗುತ್ತಾ ಇರುತ್ತದೆ. ವೇಗ ಹೆಚ್ಚಾಗುತ್ತಾ ಹೋದಂತೆ ನಕ್ಷತ್ರಗಳೂ, ಗ್ರಹಗಳೂ ತಮ್ಮ ಪಥವನ್ನು ಬಿಟ್ಟು ಯದ್ವಾತದ್ವ ಚಲಿಸತೊಡಗುತ್ತವೆ. ಹೀಗೆ ಚಲಿಸುವಾಗ ಅವು ಪರಸ್ಪರ ಡಿಕ್ಕಿ ಹೊಡೆದು ಅಲ್ಲೊಂದು ಸ್ಫೋಟವುಂಟಾಗುತ್ತದೆ. ಈ ಸ್ಫೋಟವು ಮಹಾಸ್ಫೋಟಕ್ಕೆ ಹೇತುವಾಗಲಿದ್ದು, ಭೂಮಿಯ ನಾಶಕ್ಕೆ ಕಾರಣವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com