ಗ್ರೀಸ್ ಹಣಕಾಸು ಸಚಿವ ಯನಿಸ್ ರಾಜಿನಾಮೆ

ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಕಂಗೆಟ್ಟಿರುವ ಗ್ರೀಸ್ ಹಣಕಾಸು ಸಚಿವ ಯನಿಸ್ ವರೋಫಕಿಸ್ ಅವರು ಸೋಮವಾರ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಯನಿಸ್ ವರೋಫಕಿಸ್
ಯನಿಸ್ ವರೋಫಕಿಸ್

ಅಥೆನ್ಸ್: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಕಂಗೆಟ್ಟಿರುವ ಗ್ರೀಸ್ ಹಣಕಾಸು ಸಚಿವ ಯನಿಸ್ ವರೋಫಕಿಸ್ ಅವರು ಸೋಮವಾರ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಜನಮತ ಗಣನೆಯಲ್ಲಿ 'ಯೆಸ್‌' ಮತ ಹೆಚ್ಚು ಬಂದರೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಯನಿಸ್ ಕಳೆದ ವಾರ ಭರವಸೆ ನೀಡಿದ್ದರು. ಆದರೆ ಭಾನುವಾರ ಜನಮತ ಸಂಗ್ರಹಣೆಯಲ್ಲಿ ಐರೋಪ್ಯ ಒಕ್ಕೂಟದ ಸಾಲ ನೀಡಿಕೆ ಷರತ್ತುಗಳನ್ನು ಜನ ತಿರಸ್ಕರಿಸಿದ್ದು, 'ನೋ'ಗೆ ಜೈ ಎಂದಿದ್ದಾರೆ. 'ಯೆಸ್‌' ಮತ ಕಡಿಮೆ ಬಂದಿದೆ. ಆದರೂ ಹಣಕಾಸು ಸಚಿವರು ರಾಜಿನಾಮೆ ನೀಡಿದ್ದಾರೆ.

ಹಣಕಾಸು ಸಂಸ್ಥೆಗಳು ವಿಧಿಸಿರುವ ಷರತ್ತುಗಳ ಪರ(ಯೆಸ್) ಮತ್ತು ವಿರುದ್ಧ(ನೋ) ಮತ ಚಲಾಯಿಸುವ ಅವಕಾಶ ನೀಡಲಾಗಿತ್ತು. ನೋ ಎಂದು ಮದಾನ ಮಾಡುವಂತೆ ಗ್ರೀಸ್ ಪ್ರಧಾನಿ ಕೋರಿದ್ದರು. ನೋ ಎನ್ನುವುದು ಗ್ರೀಸ್ ಬಿಕ್ಕಟ್ಟನ್ನು ಅತ್ಯಂತ ಬೇಗ ಪರಿಹರಿಸಲಿದೆ ಎನ್ನುವುದು ಗ್ರೀಸ್ ಜನತೆ ವಿಶ್ವಾಸ. ಹೀಗಾಗಿ ನೋ ಎಂದು ಶೇ.61ಕ್ಕೂ ಹೆಚ್ಚು ಮತ ಪ್ರಾಪ್ತಿಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com