ಹೂಡಿಕೆದಾರರಿಗೆ ಮೋಸ: ಅನಿವಾಸಿ ಭಾರತೀಯನಿಗೆ 6 ವರ್ಷ ಜೈಲು

ಹೂಡಿಕೆದಾರರಿಗೆ ಕೋಟ್ಯಾಂತರ ರುಪಾಯಿ ಹಣ ಮೋಸ ಮಾಡಿದ ಹಿನ್ನಲೆಯಲ್ಲಿ ಅನಿವಾಸಿ ಭಾರತೀಯನೊಬ್ಬನಿಗೆ ನ್ಯೂಯಾರ್ಕ್ ನ್ಯಾಯಾಲಯವು 6 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 9 ಮಿಲಿಯನ್ ಡಾಲರ್ ಗಳನ್ನು ದಂಡ ವಿಧಿಸಿ ತೀರ್ಪು ನೀಡಿದೆ...
ಹೂಡಿಕೆದಾರರಿಗೆ ಮೋಸ: ಅನಿವಾಸಿ ಭಾರತೀಯನಿಗೆ 6 ವರ್ಷ ಜೈಲು (ಸಾಂದರ್ಭಿಕ ಚಿತ್ರ)
ಹೂಡಿಕೆದಾರರಿಗೆ ಮೋಸ: ಅನಿವಾಸಿ ಭಾರತೀಯನಿಗೆ 6 ವರ್ಷ ಜೈಲು (ಸಾಂದರ್ಭಿಕ ಚಿತ್ರ)

ನ್ಯೂಯಾರ್ಕ್: ಹೂಡಿಕೆದಾರರಿಗೆ ಕೋಟ್ಯಾಂತರ ರುಪಾಯಿ ಹಣ ಮೋಸ ಮಾಡಿದ ಹಿನ್ನಲೆಯಲ್ಲಿ ಅನಿವಾಸಿ ಭಾರತೀಯನೊಬ್ಬನಿಗೆ ನ್ಯೂಯಾರ್ಕ್ ನ್ಯಾಯಾಲಯವು 6 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 9 ಮಿಲಿಯನ್ ಡಾಲರ್ ಗಳನ್ನು ದಂಡ ವಿಧಿಸಿ ತೀರ್ಪು ನೀಡಿದೆ.

ಮೂಲತಃ ಭಾರತೀಯನಾದ ನೀಲ್ ಗೋಯಲ್ (34) ಚಿಟ್ ಫಂಡ್ ಹೆಸರಿನಲ್ಲಿ ಅಲ್ಲಿನ ಜನರಿಂದ ಕೋಟ್ಯಾಂತರ ರುಪಾಯಿ ಹಣ ಸಂಗ್ರಹಸಿದ್ದಾನೆ. ನಂತರ ಆ ಹಣವನ್ನು ತನ್ನ ಸ್ವಂತ ಜೀವನಕ್ಕೆ ಬಳಸಿಕೊಂಡಿದ್ದ ಎಂದು ಹೇಳಿ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಅರ್ಜಿಯೊಂದು ದಾಖಲಾಗಿತ್ತು.

ಪ್ರಕರಣ ಸಂಬಂಧ ಇಂದು ವಿಚಾರಣೆ ಕೈಗೆತ್ತಿಗೊಂಡ ನ್ಯಾಯಾಲಯವು ವಿಚಾರಣೆ ವೇಳೆ ಗೋಯಲ್ ಅಪರಾಧಿಯೆಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಪರಾಧಿಗೆ 6 ವರ್ಷ ಜೈಲು ಹಾಗೂ 9 ಮಿಲಿಯನ್ ಡಾಲರ್ ಗಳನ್ನು ದಂಡ ಕಟ್ಟುವಂತೆ ಶಿಕ್ಷೆ ವಿಧಿಸಿದೆ. ಗೋಯಲ್ ಜೈಲು ಶಿಕ್ಷೆ ಸೆ.17 ರಿಂದ ಆರಂಭವಾಗಲಿದೆ ಎಂದು ನ್ಯಾಯಾಧೀಶ ಮ್ಯಾಥ್ಯೂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com