ಯುರೇನಿಯಂ ಪೂರೈಕೆ ಸೇರಿದಂತೆ 5 ಮಹತ್ವದ ಒಪ್ಪಂದಗಳಿಗೆ ಭಾರತ-ಕಜಕಿಸ್ಥಾನ ಸಹಿ

ಕಜಕಿಸ್ಥಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಜಕಿಸ್ಥಾನ ಅಧ್ಯಕ್ಷ ನೂರ್‌ ಸುಲ್ತಾನ್ ನಜರ್‌ಬಯೋವ್ ಅವರೊಂದಿಗೆ ಐದು ಮಹತ್ವದ ಒಪ್ಪಂದಗಳ ಒಡಂಬಡಿಕೆ ಮಾಡಿಕೊಂಡಿದ್ದಾರೆ.
ಉಭಯ ನಾಯಕರ ದ್ವಿಪಕ್ಷೀಯ ಮಾತುಕತೆ(ಕೃಪೆ: ಟ್ವೀಟ್ಟರ್)
ಉಭಯ ನಾಯಕರ ದ್ವಿಪಕ್ಷೀಯ ಮಾತುಕತೆ(ಕೃಪೆ: ಟ್ವೀಟ್ಟರ್)

ಅಸ್ಟಾನಾ: ಕಜಕಿಸ್ಥಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಜಕಿಸ್ಥಾನ ಅಧ್ಯಕ್ಷ ನೂರ್‌ ಸುಲ್ತಾನ್ ನಜರ್‌ಬಯೋವ್ ಅವರೊಂದಿಗೆ ಐದು ಮಹತ್ವದ ಒಪ್ಪಂದಗಳ ಒಡಂಬಡಿಕೆ ಮಾಡಿಕೊಂಡಿದ್ದಾರೆ.

ಮಿಲಿಟರಿ ಸಹಕಾರ, ಯುರೇನಿಯಂ ಪೂರೈಕೆ ಸೇರಿದಂತೆ ಐದು ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ಕಜಕಿಸ್ಥಾನ ಸಹಿ ಹಾಕಿವೆ. ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನೂರ್‌ ಸುಲ್ತಾನ್ ನಜರ್‌ಬಯೋವ್ ಅವರು ನಡುವಿನ ದ್ವಿಪಕ್ಷೀಯ ಮಾತುಕತೆಗಳ ನಂತರ ಉಭಯ ನಾಯಕರು ಈ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಕಜಕಿಸ್ಥಾನದಲ್ಲಿ ಹೈಡ್ರೋ ಕಾರ್ಬನ್ ಹೇರಳವಾಗಿದ್ದು, ಈ ಬಗ್ಗೆ ಅಧ್ಯಕ್ಷ ನಜರ್‌ ಬಯೋವ್ ಅವರೊಂದಿಗೆ ದ್ವಿಪಕ್ಷೀಯ ವ್ಯಾಪಾರ-ವಹಿವಾಟು ವಿಸ್ತರಣೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಸ್ತೃತ ಮಾತುಕತೆ ನಡೆಸಿದರು. ವ್ಯೂಹಾತ್ಮಕವಾಗಿ ಪರಸ್ಪರ ವ್ಯಾಪಾರ, ರಕ್ಷಣೆ, ಭಯೋತ್ಪಾದನೆ ನಿಗ್ರಹ ಸೇರಿದಂತೆ ಹಲವು ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ ಉಭಯ ನಾಯಕರು ಆರ್ಥಿಕ ಪುನಶ್ಚೇತನ, ಉದ್ಯೋಗ ಸೃಷ್ಟಿ ಬಗ್ಗೆಯೂ ಚರ್ಚಿಸಿದರು.

ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪ್ರಾಂತೀಯ ಶಾಂತಿ ಸ್ಥಾಪನೆ, ಪರಸ್ಪರ ಸಂಬಂಧ ವೃದ್ಧಿ, ಸೌಹಾರ್ದತೆ, ಸುಧಾರಣೆಗಳ ಕುರಿತಂತೆ ನಾವು ಮಾತುಕತೆ ನಡೆಸಿದೆವು ಎಂದು ಹೇಳಿದರು. ದೇಶದ ಇಂಧನ ಕೊರತೆ ನೀಗಿಸುವ ನಿಟ್ಟಿನಲ್ಲಿ ದೀರ್ಘಕಾಲಿಕವಾಗಿ ಕಜಕಿಸ್ಥಾನವು ತನ್ನ ನೈಸರ್ಗಿಕ ಯುರೇನಿಯಂ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ. ಈ ರೀತಿ ಯುರೇನಿಯಂ ಖರೀದಿ ಗುತ್ತಿಗೆ ಪಡೆಯುವ ಮೂಲಕ ಭಾರತವು ನಾಗರಿಕ ಪರಮಾಣು ಸಹಕಾರ ಪಡೆದಿರುವ ಮೊಟ್ಟ ಮೊದಲ ದೇಶ ಕಚಕಿಸ್ಥಾನವಾಗಿದೆ ಎಂದು ಮೋದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com