ಕಜಕಿಸ್ಥಾನ ಅಧ್ಯಕ್ಷರಿಗೆ ಪ್ರಧಾನಿಯಿಂದ ಭಾರತೀಯ ಧರ್ಮಗಳ ಬಗೆಗಿನ ಪುಸ್ತಕಗಳ ಉಡುಗೊರೆ

ಕಜಕಿಸ್ಥಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಅಧ್ಯಕ್ಷರಿಗೆ ಭಾರತದಲ್ಲಿ ಜನ್ಮ ಪಡೆದ ಧರ್ಮಗಳ ಬಗೆಗಿನ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪುಸ್ತಕಗಳ ಉಡುಗೊರೆ ಕುರಿತು ಪ್ರಧಾನಿ ಮೋದಿ ಟ್ವೀಟ್
ಪುಸ್ತಕಗಳ ಉಡುಗೊರೆ ಕುರಿತು ಪ್ರಧಾನಿ ಮೋದಿ ಟ್ವೀಟ್

ಬೆಂಗಳೂರು: ಕಜಕಿಸ್ಥಾನ  ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಅಧ್ಯಕ್ಷರಿಗೆ ಭಾರತದಲ್ಲಿ ಜನ್ಮ ಪಡೆದ  ಧರ್ಮಗಳ ಬಗೆಗಿನ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕಜಕಿಸ್ಥಾನದ  ಅಧ್ಯಕ್ಷ ನೂರ್​ಸುಲ್ತಾನ್ ನಜರ್​ಬಯೆವ್ ಅವರು 2003 ರಿಂದ ಕಜಕಿಸ್ಥಾನದ ರಾಜಧಾನಿ ಆಸ್ತಾನದಲ್ಲಿರುವ ಅರಮನೆಯಲ್ಲಿ ವಿವಿಧ ಧಾರ್ಮಿಕ ಮುಖಂಡರ ಸಮ್ಮೇಳನ ನಡೆಸುತ್ತಿದ್ದಾರೆ. ಪ್ರತಿ ಮೂರು ವರ್ಷಕ್ಕೊಮ್ಮೆ ಈ ಸಮ್ಮೇಳನ ನಡೆಯಲಿದೆ.

ಈಗ ಪ್ರಧಾನಿ ನರೇಂದ್ರ ಮೋದಿ ಅವರು ಕಜಕಿಸ್ಥಾನದ ಅಧ್ಯಕ್ಷರಿಗೆ ಭಾರತದ ಧರ್ಮಗಳ ಕುರಿತು ಪುಸ್ತಕಗಳನ್ನು ನೀಡಿದ್ದು, ಇದರಲ್ಲಿ ಇಂಗ್ಲೀಷ್ ಗೆ ಅನುವಾದಗೊಂಡಿರುವ ಗುರು ಗ್ರಂಥ ಸಾಹೇಬ್, ನವದೆಹಲಿಯ ನ್ಯಾಷನಲ್ ಮ್ಯೂಸಿಯಂ ನ ಹಸ್ತಪ್ರತಿಗಳ ಪ್ರತಿಗಳು ಸೇರಿವೆ.

ಹಸ್ತಪ್ರತಿಗಳ ಪೈಕಿ ಪ್ರಾಕೃತ ಭಾಷೆಯಲ್ಲಿರುವ ಜೈನ ಧರ್ಮದ ಅತ್ಯಂತ ಪೂಜ್ಯ ಗ್ರಂಥ ಭದ್ರಬಾಹು ಕಲ್ಪಸೂತ್ರ( 15 ನೇ ಶತಮಾನ) ಸಂಸ್ಕೃತದಲ್ಲಿರುವ ಬೌದ್ಧ ಧರ್ಮದ ಅಷ್ಟಾಸಹಸ್ರಿಕ ಪ್ರಜ್ಞಾಪರಮಿತ( 12 ನೇ ಶತಮಾನ) ಪರ್ಷಿಯನ್ ಭಾಷೆಗೆ ಅನುವಾದಗೊಂಡಿರುವ ವಾಲ್ಮೀಕಿ ರಾಮಾಯಣ( 18 ನೇ ಶತಮಾನದ) ಪ್ರತಿಗಳನ್ನು ಕಜಗಿಸ್ಥಾನದ ಅಧ್ಯಕ್ಷರಿಗೆ ನೀಡಲಾಗಿದೆ ಎಂದು ವಿದೇಶಾಂಗ ಇಲಾಖೆಯಾ ಅಧಿಕೃತ ಹೇಳಿಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com