ಇಫ್ತಾರ್ ಕೂಟದಲ್ಲಿ ವಿಷಪೂರಿತ ಆಹಾರ ಸೇವನೆ: 45 ಇಸಿಸ್ ಉಗ್ರರ ಸಾವು

ರಂಜಾನ್ ಹಿನ್ನೆಲೆಯಲ್ಲಿ ಇಫ್ತಿಯಾರ್ ಕೂಟದಲ್ಲಿ ವಿಷ ಬೆರೆಸಿದ್ದ ಆಹಾರ ತಿಂದು 45 ಇಸ್ಲಾಮಿಕ್ ಸ್ಟೇಟ್ ಉಗ್ರರು ಮೃತಪಟ್ಟಿರುವ ಘಟನೆ ಸಿರಿಯಾ ಮಸೂಲ್ ನಲ್ಲಿ ನಡೆದಿದೆ...
ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗಿರುವ ಇಸಿಸ್ ಉಗ್ರರು(ಫೋಟೋ ಕೃಪೆ: ಟ್ವೀಟರ್)
ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗಿರುವ ಇಸಿಸ್ ಉಗ್ರರು(ಫೋಟೋ ಕೃಪೆ: ಟ್ವೀಟರ್)

ಮೊಸುಲ್: ರಂಜಾನ್ ಹಿನ್ನೆಲೆಯಲ್ಲಿ ಇಫ್ತಿಯಾರ್ ಕೂಟದಲ್ಲಿ ವಿಷ ಬೆರೆಸಿದ್ದ ಆಹಾರ ತಿಂದು 45 ಇಸ್ಲಾಮಿಕ್ ಸ್ಟೇಟ್ ಉಗ್ರರು ಮೃತಪಟ್ಟಿರುವ ಘಟನೆ ಸಿರಿಯಾ ಮಸೂಲ್ ನಲ್ಲಿ ನಡೆದಿದೆ.

ಉಪವಾಸ ಕೈಗೊಂಡಿದ್ದ 145 ಮಂದಿ ಉಗ್ರರು ಪದ್ಧತಿಯಂತೆ ಸಾಂಪ್ರದಾಯಿಕ ಆಹಾರ ಸೇವಿಸಿದ್ದಾರೆ. ಆಹಾರ ಸೇವಿಸಿದ ಸ್ವಲ್ಪ ಸಮಯದಲ್ಲೇ 45 ಉಗ್ರರು ಅಸುನೀಗಿದ್ದಾರೆ. ಆಹಾರದಲ್ಲಿ ಉದ್ಧೇಶಪೂರ್ವಕವಾಗಿ ವಿಷ ಬೆರೆಸಲಾಗಿತ್ತು ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಉಳಿದಂತೆ 100ಕ್ಕೂ ಅಧಿಕ ಉಗ್ರರು ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್ ಉಗ್ರ ಸಂಘಟನೆಯಿಂದ ಸಾವಿರಾರು ಮಂದಿಯ ಮಾರಣಹೋಮ ನಡೆಸಿತ್ತು. ಇಸಿಸ್ ನ ಹೀನ ಕೃತ್ಯಗಳಿಂದ ನಲುಗಿದ್ದ ಜನತೆ ಇಸಿಸ್ ನ ವಿರುದ್ಧ ತಿರುಗಿಬಿದ್ದಿದ್ದು, ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com