ಸಿಲ್ವಿಯೋ ಬರ್ಲುಸ್ಕೋನಿ(ಸಂಗ್ರಹ ಚಿತ್ರ)
ವಿದೇಶ
ಇಟಲಿ ಮಾಜಿ ಪ್ರಧಾನಿ ಬರ್ಲುಸ್ಕೋನಿಗೆ 3 ವರ್ಷ ಜೈಲು ಶಿಕ್ಷೆ
ಸೆನೆಟರ್ ಒಬ್ಬರಿಗೆ ಲಂಚ ನೀಡಿದ ಅಪರಾಧಕ್ಕಾಗಿ 78 ವರ್ಷದ ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬರ್ಲುಸ್ಕೋನಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ...
ರೋಮ್: ಸೆನೆಟರ್ ಒಬ್ಬರಿಗೆ ಲಂಚ ನೀಡಿದ ಅಪರಾಧಕ್ಕಾಗಿ 78 ವರ್ಷದ ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬರ್ಲುಸ್ಕೋನಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
2006ರಲ್ಲಿ ಎಡಪಂಥೀಯ ಸರಕಾರವನ್ನು ಬೀಳಿಸುವ ಯತ್ನದಲ್ಲಿ ಮಾಜಿ ಪ್ರಧಾನಿಗಳು ಸೆನೆಟರ್ ಒಬ್ಬನಿಗೆ 30 ಲಕ್ಷ ಯೂರೋ(33 ಲಕ್ಷ ಡಾಲರ್) ಲಂಚ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮೂವರು ವರ್ಷ ಜೈಲು ಶಿಕ್ಷೆ ವಿಧಿಸಿದ್ದು ಅಲ್ಲದೆ, ಮುಂದಿನ ಐದು ವರ್ಷಗಳ ಕಾಲ ಯಾವುದೇ ಸಾರ್ವಜನಿಕ ಹುದ್ದೆಯನ್ನು ನಿರ್ವಹಿಸದಂತೆ ಅವರ ಮೇಲೆ ನಿಷೇಧ ಹೇರಲಾಗಿದೆ.
ನ್ಯಾಯಾಲಯದ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬರ್ಲುಸ್ಕೋನಿ, ಇದು ಅಸಮರ್ಪಕ, ಅತಾರ್ಕಿಕ, ಹಾಸ್ಯಾಸ್ಪದ ಎಂದು ಪ್ರತಿಕ್ರಿಯಿಸಿದ್ದಾರೆ.

