ರಸ್ತೆ ಬದಿಯಲ್ಲಿ ಓದುತ್ತಿದ್ದ ಫೋಟೊ ವೈರಲ್: ಫಿಲಿಪೀನ್ಸ್ ಬಾಲಕನಿಗೆ ನೆರವಿನ ಮಹಾಪೂರ

ಫಿಲಿಪಿನೊ ನಿರಾಶ್ರಿತ ಬಾಲಕನೊಬ್ಬ ಮೆಕ್ಡೊನಾಲ್ಡ್ಸ್ ಔಟ್ ಲೆಟ್ ನಲ್ಲಿದ್ದ ಮಸುಕಾದ ಬೆಳಕಿನಲ್ಲಿ ಓದುತ್ತಿರುವ ವಿಡಿಯೋ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.
ರಸ್ತೆ ಬದಿಯಲ್ಲಿ ಕುಳಿತು ಓದುತ್ತಿರುವ  ನಿರಾಶ್ರಿತ ಫಿಲಿಪಿನೊ ಬಾಲಕ
ರಸ್ತೆ ಬದಿಯಲ್ಲಿ ಕುಳಿತು ಓದುತ್ತಿರುವ ನಿರಾಶ್ರಿತ ಫಿಲಿಪಿನೊ ಬಾಲಕ

ಮನಿಲಾ: ಫಿಲಿಪಿನೊ ನಿರಾಶ್ರಿತ ಬಾಲಕನೊಬ್ಬ ಮೆಕ್ಡೊನಾಲ್ಡ್ಸ್ ಔಟ್ ಲೆಟ್ ನಲ್ಲಿದ್ದ ಮಸುಕಾದ ಬೆಳಕಿನಲ್ಲಿ ಓದುತ್ತಿರುವ ಫೋಟೊ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.

ಡೇನಿಯಲ್ ಕ್ಯಾಬ್ರೆರಾ ಎಂಬ ಫಿಲಿಫೇನ್ಸ್ ನ  9 ವರ್ಷದ ನಿರಾಶ್ರಿತ ಬಾಲಕ, ಪೊಲೀಸ್ ಆಗಬೇಕೆಂಬ ಕನಸುಹೊತ್ತಿದ್ದಾನೆ, ಮನೆ ಇರದಿದ್ದರೂ ತನ್ನ ಕನಸನ್ನು ನನಸು ಮಾಡಲು ಮೆಕ್ಡೊನಾಲ್ಡ್ಸ್ ಔಟ್ ಲೆಟ್ ನಲ್ಲಿದ್ದ ಮಸುಕಾದ ಬೆಳಕಿನಲ್ಲಿ ಓದುತ್ತಾನೆ. ಈ ಫೋಟೊ ಇಂಟರ್ ನೆಟ್ ನಲ್ಲಿ ವೈರಲ್ ಆಗಿದ್ದು ಆತನಿಗೆ ಅಪಾರ ನೆರವು ದೊರೆಯುತ್ತಿದ್ದು, ಶಾಲೆಯಿಂದ ವಿದ್ಯಾರ್ಥಿವೇತನ ಹಾಗೂ ಇನ್ನಿತರ ಸೌಲಭ್ಯ ದೊರೆಯುತ್ತಿದೆ.   

ತನಗೆ ಸಿಕ್ಕ ನೆರವಿನಿಂದ ಬಾಲಕ ಹಾಗೂ ಆತನ ತಾಯಿ ಮೂಕವಿಸ್ಮಿತರಾಗಿದ್ದು, ಇನ್ನು ಮುಂದೆ ಓದುವುದಕ್ಕಾಗಿ ತನ್ನ ಮಗ ಹಿಂದಿನಂತೆ ಕಷ್ಟಪಡಬೇಕಿಲ್ಲ ಎಂದು ಡೇನಿಯಲ್ ನ ತಾಯಿ ಕ್ರಿಸ್ಟಿನಾ ಎಸ್ಪಿನೊಸಾ ಹೇಳಿದ್ದಾರೆ.

ಡೆನಿಯಲ್ ರಸ್ತೆ ಬದಿಯಲ್ಲಿ ಕುಳಿತು ಮೆಕ್ಡೊನಾಲ್ಡ್ಸ್ ಔಟ್ ಲೆಟ್ ಬಳಿಯಿದ್ದ ದೀಪದ ಸಹಾಯದಿಂದ ಹೋಂ ವರ್ಕ್ ಮಾಡುತ್ತಿದ್ದ ಫೋಟೊವನ್ನು ಮೆಡಿಕಲ್ ಟೆಕ್ನಾಲಜಿ ವ್ಯಾಸಂಗ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬರು ಒಂದು ತಿಂಗಳ ಹಿಂದೆ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದರು.  

ಈ ಮಗುವಿನಿಂದ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದು ಫೇಸ್ ಬುಕ್ ನಲ್ಲಿ ಫೋಟೋ ಅಪ್ ಲೋಡ್ ಮಾಡಿದ್ದ ವಿದ್ಯಾರ್ಥಿ ಹೇಳಿದ್ದರು. ಫೇಸ್ ಬುಕ್ ನಲ್ಲಿ ಈ ಚಿತ್ರ 7000 ಸಾವಿರಕ್ಕೂ ಹೆಚ್ಚು ಶೇರ್ ಆಗಿದ್ದು, ಈ ಬಗ್ಗೆ  ಸ್ಥಳೀಯ ಮಾಧ್ಯಮವೊಂದು ಸುದ್ದಿ ಪ್ರಕಟಿಸಿತ್ತು.  ತಾವು ವಾಸಿಸುತ್ತಿದ್ದ ಮನೆ ಬೆಂಕಿಗೆ ಆಹುತಿಯಾದ ಪರಿಣಾಮ ಕ್ರಿಸ್ಟಿನಾ ಎಸ್ಪಿನೊಸಾ ಡೇನಿಯಲ್ ಕ್ಯಾಬ್ರೆರಾ ಹಾಗೂ ಇನ್ನು ಇಬ್ಬರು ಮಕ್ಕಳೊಂದಿಗೆ ತಾನು ಕೆಲಸ ಮಾಡುತ್ತಿರುವ ಮಾಲಿಕರ ಕಿರಾಣಿ ಅಂಗಡಿಯಲ್ಲಿ ವಾಸವಾಗಿದ್ದಾರೆ.

2013 ರಲ್ಲಿ ಡೆನಿಯಲ್ ತಂದೆಗೆ ಡಯೇರಿಯಾ ಉಂಟಾಗಿ ಸಾವನ್ನಪ್ಪಿದ್ದರು. ಡೆನಿಯಲ್ ತಾಯಿಗೆ ಪ್ರತಿದಿನಕ್ಕೆ 1 .77 ಡಾಲರ್ ವೇತನ ಸಿಗುತ್ತಿದ್ದು ಮತ್ತೆ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅದ ನಂತರ ಡೆನಿಯಲ್ ಗೆ ನೆರವು ಸಿಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com