೪೬ ಅಪರಾಧಿಗಳ ಶಿಕ್ಷೆ ಕಡಿತಗೊಳಿಸಿದ ಒಬಾಮಾ

ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ಇಂದು ಡ್ರಗ್ ಕಳ್ಳಸಾಗಾಣಿಕೆ ಸಂಬಧಿಸಿದ ೪೬ ಅಪರಾಧಿಗಳಿಗೆ ಕ್ಷಮಾದಾನ ನೀಡಿ, ಈ ಹಿಂದೆ ಅವರಿಗೆ ನೀಡಿದ್ದ ಶಿಕ್ಷೆ
ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ
ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ

ವಾಶಿಂಗ್ಟನ್: ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ಇಂದು ಡ್ರಗ್ ಕಳ್ಳಸಾಗಾಣಿಕೆ ಸಂಬಧಿಸಿದ ೪೬ ಅಪರಾಧಿಗಳಿಗೆ ಕ್ಷಮಾದಾನ ನೀಡಿ, ಈ ಹಿಂದೆ ಅವರಿಗೆ ನೀಡಿದ್ದ ಶಿಕ್ಷೆ ಹಳೆಯ ಕಾನೂನಿನಡಿ ನೀಡಿದ್ದ ಮಿತಿಮೀರಿದ ಕಠಿಣ ಶಿಕ್ಷೆಯಾಗಿದ್ದವು ಎಂದಿದ್ದಾರೆ.

ಈ ಹಿಂದೆಯೂ ಅಹಿಂಸಾತ್ಮಕ ಡ್ರಗ್ ಅಪರಾಧಿಗಳ ಶಿಕ್ಷೆಯನ್ನು ಕಡಿತಗೊಳಿಸಿದ್ದರೂ, ಆದರೆ ಅದು ಇಂತಹ ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ.

"ಬಹಳ ವರ್ಷಗಳ ಹಿಂದೆ ಶಿಕ್ಷೆಗೆ ಗುರಿಯಾಗಿದ್ದ ೪೬ ಖೈದಿಗಳ ಶಿಕ್ಷೆಯನ್ನು ಕಡಿತಗೊಳಿಸುತ್ತಿದ್ದೇನೆ- ಅವುಗಳಲ್ಲಿ ಕೆಲವು ಪ್ರಕರಣಗಳು ದಶಕಗಳ ಹಿಂದಿನವು" ಎಂದು ಅಮೇರಿಕ ಶ್ವೇತಭವನ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಒಬಾಮಾ ತಿಳಿಸಿದ್ದಾರೆ.

"ಈ ಪುರುಷರು ಮತ್ತು ಮಹಿಳೆಯರ್ಯಾರೂ ಕಠಿಣ ಅಪರಾಧಿಗಳಲ್ಲ., ಆದರೆ ಇವರಲ್ಲಿ ಬಹುತೇಕರಿಗೆ ೨೦ ವರ್ಷದ ಕಠಿಣ ಸಜೆ ನಿಡಲಾಗಿತ್ತು... ಅದು ಅಹಿಂಸಾತ್ಮಕ ಡ್ರಗ್ ಅಪರಾಧಗಳಿಗೆ" ಎಂದು ಅವರು ತಿಳಿಸಿದ್ದಾರೆ.

ಅಪರಾಧಿ ಕಾನೂನು ವ್ಯವಸ್ಥೆಯಲ್ಲಿ ತಿದ್ದುಪಡಿ ತರುವ ಒಬಾಮಾ ಸರ್ಕಾರದ ಕ್ರಮವಾಗಿ ಈ ಹೆಜ್ಜೆ ಇಡಲಾಗಿದೆ.

"ಅವರಿಗೆ ನೀಡಿರುವ ಶಿಕ್ಷೆ, ಅವರು ಮಾಡಿರುವ ಅಪರಾಧಕ್ಕೆ ಸರಿಯಾದುದಲ್ಲ. ಇಂದಿನ ಕಾನೂನಿನಡಿ ಅವರಿಗೆ ಶಿಕ್ಷೆ ನೀಡಿದ್ದಾರೆ ಅವರೆಲ್ಲರೂ ಈ ಹೊತ್ತಿಗೆ ತಮ್ಮ ಶಿಕ್ಷೆ ಅನುಭವಿಸಿ ಹಿಂದಿರುಗಿರುತ್ತಿದ್ದರು. ಆದುದರಿಂದ ಅವರಿಗೆ ಎರಡನೆ ಅವಕಾಶ ನೀಡಬೇಕು ಎಂದು ನಾನು ನಂಬಿದ್ದೇನೆ" ಎಂದು ಅವರು ತಿಳಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com