

ವಾಷಿಂಗ್ಟನ್: ಇರಾನ್‍ನ ಜೈಲುಗಳಲ್ಲಿರುವ ಅಮೆರಿಕನ್ನರ ಬಿಡುಗಡೆ ಬಗ್ಗೆ ಪ್ರಶ್ನೆಯೆತ್ತಿದ ಪ್ರಮುಖ ಸುದ್ದಿ ವಾಹಿನಿಯೊಂದರ ವರದಿ ಗಾರನ ಮೇಲೆ ಅಮೆರಿಕ ಅಧ್ಯಕ್ಷ ಒಬಾಮ ಕೆಂಡಕಾರಿದ ಘಟನೆ ನಡೆದಿದೆ. ಸಿಬಿಎಸ್ ನ್ಯೂಸ್‍ನ ವೈಟ್‍ಹೌಸ್ ವರದಿಗಾರನಾಗಿ ರುವ ಮೇಜರ್ ಗ್ಯಾರೆಟ್, ಅಣು ಒಪ್ಪಂದಕ್ಕೆ ಸಂಬಂಧಿಸಿ ಇರಾನ್‍ನೊಂದಿಗೆಸಂಧಾನ ಮಾತುಕತೆ ಯಶಸ್ವಿಯಾಗಿ ಪೂರೈಸಿರುವ ಒಬಾಮ ಅವರು ಅಲ್ಲಿನ ಜೈಲುಗಳಲ್ಲಿರುವ ಅಮೆರಿಕದ ನಾಗರಿಕರ ಬಿಡುಗಡೆಗೆ ಏನಾದರೂ ಕ್ರಮ ಕೈಗೊಂಡಿ ದ್ದಾರೆಯೇಎಂದು ಪ್ರಶ್ನಿಸಿದರು. ಇದರಿಂದ ಕೋಪಗೊಂಡ ಒಬಾಮ, ``ಮೇಜರ್ ಅವರೇ, ಇರಾನ್‍ನ ಜೈಲುಗಳಲ್ಲಿರುವ ಅಮೆರಿಕದ ನಾಗರಿಕರೊಂದಿಗೆ ಇದ್ದು, ನಾನು ಸಂತುಷ್ಟಿಗೊಂಡಿದ್ದೇನೆ ಎಂಬುದು ನಿಮ್ಮ ಮಾತಿನ ಅರ್ಥವಾಗಿದ್ದರೆ, ಅದು ನಾನ್ ಸೆನ್ಸ್. ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಮಾತಾಡಿ'' ಎಂದು ಹರಿಹಾಯ್ದರು. ಜತೆಗೆ, ನಾನು ಈಗಾಗಲೇ ಬಂಧಿತರ ಕುಟುಂಬದಜತೆ ಮಾತನಾಡಿದ್ದೇನೆ. ಅವರ ಬಿಡುಗಡೆಗೆ ಎಲ್ಲ ಪ್ರಯತ್ನ ನಡೆಸುತ್ತಿದ್ದೇವೆ ಎಂದೂ ಹೇಳಿದರು.