
ಕೈರೊ: ಈಜಿಪ್ಟ್ ನ ಉತ್ತರ ಸಿನಾಯ್ ದಲ್ಲಿರುವ ಸೇನಾ ಪ್ರಧಾನಕಾರ್ಯಾಲಯಗಳ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರು ಭಾನುವಾರ ದಾಳಿ ನಡೆಸಿದ್ದು, ಪರಿಣಾಮ 59 ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಅನ್ಸಾರ್ ಬೆಟ್ ಅಲ್ ಮಕ್ದಿಸ್ ಉಗ್ರ ಸಂಘಟನೆಯ ಪ್ರಾಬಲ್ಯವಿರುವ ಗಬಲ್ ಅಲಿಕಾದ ಶೇಖ್ ಜವಾಯದ್ ಪ್ರದೇಶದಲ್ಲಿ ಸೇನಾ ವಾಹನಗಳನ್ನೇ ಗುರಿಯಾಗಿಸಿಕೊಂಡು ಉಗ್ರರು ನಡೆಸಿದ್ದಾರೆ. ಇದರ ಪರಿಣಾಮ ಸ್ಥಳದಲ್ಲಿದ್ದ 59ಕ್ಕೂ ಹೆಚ್ಚು ಉಗ್ರರು ದಾಳಿಯಲ್ಲಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸೇನಾ ವಾಹನಗಳನ್ನೇ ಗುರಿಯಾಗಿಸಿಕೊಂಡಿರುವ ಉಗ್ರರು ಉತ್ತರ ಸಿನಾಯ್ ಪ್ರದೇಶದ ಹಲವೆಡೆ ದಾಳಿ ನಡೆಸಿದ್ದು, ದಾಳಿ ವೇಳೆ ಅಹ್ಮದ್ ಗಮಲ್ ಸೇಲಂ ಎಂಬ ಉಗ್ರನನ್ನು ಬಂಧಿಸಲಾಗಿದೆ ಎಂದು ಸೇನಾ ವಕ್ತಾರರೊಬ್ಬರು ಹೇಳಿದ್ದಾರೆ.
2011ರಲ್ಲಿ ಹೊಸ್ನಿ ಮುಬಾರಕ್ ಅವರು ಪದಚ್ಯುತಗೊಂಡಾಗಿನಿಂದ ಉಗ್ರರ ದಾಳಿಗಳು ಈಜಿಪ್ಟ್ ನಾದ್ಯಂತ ಮುಂದುವರೆಯುತ್ತಲೇ ಬಂದಿದ್ದು, 2013ರಲ್ಲಿ ಮೊಹಮ್ಮದ್ ಮೊರ್ಸಿ ಅವರ ಉಚ್ಛಾಟನೆ ಬಳಿಕ ಪೊಲೀಸ್ ಹಾಗೂ ಸೇನೆಯನ್ನು ಗುರಿಯಾಗಿಸಿ ನಡೆಸುತ್ತಿರುವ ಉಗ್ರ ದಾಳಿಗಳು ಹೆಚ್ಚಾಗುತ್ತಿದೆ.
Advertisement