
ಸನಾ: ಸೌದಿ ಅರೇಬಿಯಾ ನೇತೃತ್ವದ ಮೈತ್ರಿ ಪಡೆಗಳು ಯೆಮೆನ್‌ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 120 ಮಂದಿ ನಾಗರೀಕರು ಸಾವನ್ನಪ್ಪಿದ್ದಾರೆ.
ಯೆಮೆನ್ ನ ರೆಡ್ ಸೀ ಜನವಸತಿ ಪ್ರದೇಶದಲ್ಲಿ ಬಾಂಬ್ ದಾಳಿ ನಡೆದಿದ್ದರಿಂದ ಕೆಲ ಕಟ್ಟಡಗಳು ಛಿಧ್ರಗೊಂಡು ಅಮಾಯಕ ಜನರು ಸಾವನ್ನಪ್ಪಿದ್ದಾರೆ ಎಂದು ಮಾದ್ಯಮಗಳು ವರದಿ ಮಾಡಿವೆ.
ಸೌದಿ ಪಡೆ ಮಾರ್ಚ್ ನ ನಂತರ ನಡೆಸಿದ ಮಾರಣಾಂತಿಕ ಮತ್ತು ಪೈಶಾಚಿಕ ದಾಳಿ ಇದಾಗಿದೆ ಎಂದು ಭದ್ರತಾ ಮತ್ತು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದು, ಭೀಕರದಾಳಿ ನಡೆದ ಬಳಿಕ ಸೌದಿ ಅರೇಬಿಯ ಭಾನುವಾರದಿಂದ ಅನ್ವಯವಾಗುವಂತೆ 5 ದಿನಗಳ ಕದನ ವಿರಾಮ ಘೋಷಿಸಿದೆ.
ಸೌದಿ ಅರೇಬಿಯ ನೇತೃತ್ವದಲ್ಲಿ ಮೈತ್ರಿಪಡೆಗಳು ಯೆಮೆನ್‌ನಲ್ಲಿ ಹೌದಿ ಬಂಡುಕೋರರ ವಿರುದ್ಧ ನಿರಂತರ ವೈಮಾನಿಕ ದಾಳಿ ನಡೆಸುತ್ತಿದ್ದು ಇದರಲ್ಲಿ ಅಮಾಯಕ ನಾಗರೀಕರು ಸಾವನ್ನಪ್ಪುತ್ತಿದ್ದಾರೆ.
Advertisement