ಲಾಸ್ ಏಂಜಲೀಸ್ ನಲ್ಲಿ ತೃತೀಯಲಿಂಗಿಗಳ ಮೊದಲ ಮಾಡಲಿಂಗ್ ಸಂಸ್ಥೆ

ತೃತೀಯಲಿಂಗಿಗಳಿಗಾಗಿಯೇ ಮೊದಲ ಮಾಡೆಲಿಂಗ್ ಸಂಸ್ಥೆಯೊಂದು ಲಾಸ್ ಏಂಜಲೀಸ್ ನಲ್ಲಿ ಪ್ರಾರಂಭವಾಗಲಿದ್ದು ಫ್ಯಾಷನ್ ಜಗತ್ತಿನಲ್ಲಿ ಇತಿಹಾಸವೊಂದು ನಿರ್ಮಾಣವಾಗಲಿದೆ.
ಪ್ರಥಮ ತೃತೀಯಲಿಂಗಿ ಮಾಡೆಲ್  ಆಂಡ್ರೆಜಾ ಪೆಜಿಕ್(ಸಂಗ್ರಹ ಚಿತ್ರ)
ಪ್ರಥಮ ತೃತೀಯಲಿಂಗಿ ಮಾಡೆಲ್ ಆಂಡ್ರೆಜಾ ಪೆಜಿಕ್(ಸಂಗ್ರಹ ಚಿತ್ರ)

ವಾಷಿಂಗ್ ಟನ್: ತೃತೀಯಲಿಂಗಿಗಳಿಗಾಗಿಯೇ ಮೊದಲ ಮಾಡೆಲಿಂಗ್ ಸಂಸ್ಥೆಯೊಂದು ಲಾಸ್ ಏಂಜಲೀಸ್ ನಲ್ಲಿ ಪ್ರಾರಂಭವಾಗಲಿದ್ದು ಫ್ಯಾಷನ್ ಜಗತ್ತಿನಲ್ಲಿ ಇತಿಹಾಸವೊಂದು ನಿರ್ಮಾಣವಾಗಲಿದೆ.
ಯಶಸ್ವಿ ರೂಪದರ್ಶಿಗಳನ್ನು ಲಿಂಗಭೇದವಿಲ್ಲದೇ ತಯಾರು ಮಾಡುವುದಕ್ಕೆ ಬದ್ಧರಾಗಿರುವುದಾಗಿ ಬ್ಯಾಂಕಾಕ್ ಮೂಲದ ಆಪಲ್ ಮಾಡೆಲ್ ಮ್ಯಾನೇಜ್ಮೆಂಟ್ ನ ನಿರ್ದೇಶಕ ಅಸೂನ್ಸಿಯಾನ್ ಹೇಳಿದ್ದಾರೆ. ತೃತೀಯ ಲಿಂಗಿಗಳಿಗೆ ಸಮಾನತೆ ನೀದಬೇಕೆಂಬ ಚಳುವಳಿ ನಡೆಯುತ್ತಿದ್ದು, ಲಿಂಗ ಸಮಾನತೆ ಪ್ರತಿಪಾದಿಸುವ ನಿಟ್ಟಿನಲ್ಲಿ ಆಪಲ್ ಮಾಡೆಲ್ ಮ್ಯಾನೆಜ್ ಮೆಂಟ್ ಈ ಯೋಜನೆಯನ್ನು ಜಾರಿಗೊಳಿಸುವ ನಿರ್ಧಾರ ಕೈಗೊಂಡಿದೆ.

ಬಿ ಬೋಲ್ಡ್ ಆಡ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಆಂಡ್ರೆಜಾ ಪೆಜಿಕ್ ಪ್ರಥಮ ತೃತೀಯಲಿಂಗಿ ರೂಪದರ್ಶಿ ಎಂಬ ಖ್ಯಾತಿ ಪಡೆದಿದ್ದರು. ಮಾಡೆಲ್ ಗಳಿಗಾಗಿ ಹುಡುಕುತ್ತಿರುವ ಏಜೆನ್ಸಿ ಪಟ್ಟಿಯಲ್ಲಿ ಈಗಾಗಲೇ 6 ತೃತೀಯಲಿಂಗಿಗಳನ್ನು ಆಯ್ಕೆ ಮಾಡಲಾಗಿದೆ.  ಇನ್ನು ಹೆಚ್ಚು ಜನರನ್ನು ಆಪಲ್ ಮಾಡೆಲ್ ಮ್ಯಾನೆಜ್ಮೆಂಟ್ ನಿರೀಕ್ಷಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com