ಕಲಾಂ ಒಬ್ಬ ಸಾಧಾರಣ ವಿಜ್ಞಾನಿ: ಪಾಕ್ ಅಣು ವಿಜ್ಞಾನಿ ಖಾದಿರ್ ಖಾನ್

ಪಾಕಿಸ್ತಾನ ಕಲಾಂ ಅವರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿ ಜಾಗತಿಕ ಮಟ್ಟದಲ್ಲಿ ಕೆಂಗಣ್ಣಿಗೆ ಗುರಿಯಾಗಿದೆ.
ಪಾಕಿಸ್ತಾನ ವಿಜ್ಞಾನಿ ಅಬ್ದುಲ್ ಖಾದಿರ್ ಖಾನ್(ಸಂಗ್ರಹ ಚಿತ್ರ)
ಪಾಕಿಸ್ತಾನ ವಿಜ್ಞಾನಿ ಅಬ್ದುಲ್ ಖಾದಿರ್ ಖಾನ್(ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಇಡಿ ವಿಶ್ವವೇ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಿದೆ. ಆದರೆ ಪಾಕಿಸ್ತಾನ ಮಾತ್ರ ಕಲಾಂ ಅವರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿ ಜಾಗತಿಕ ಮಟ್ಟದಲ್ಲಿ ಕೆಂಗಣ್ಣಿಗೆ ಗುರಿಯಾಗಿದೆ.

ಅಬ್ದುಲ್ ಕಲಾಂ ನಿಧನದ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಅಣು ವಿಜ್ಞಾನಿ ಹಾಗೂ ಭೌತಶಾಸ್ತ್ರಜ್ಞ ಅಬ್ದುಲ್ ಖಾದಿರ್ ಖಾನ್ ಕಲಾಂ ಒಬ್ಬ ಸಾಧಾರಣ ವಿಜ್ಞಾನಿ ಎಂದು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಈ ಮೂಲಕ ಟ್ವಿಟರ್ ನಲ್ಲಿ ಟೀಕೆಗೆ ಗುರಿಯಾಗಿದ್ದಾರೆ.
ಅಬ್ದುಲ್ ಕಲಾಂ ಅಗಲಿಕೆ ಬಗ್ಗೆ ಬಿಬಿಸಿಗೆ ನೀಡಿರುವ ದೂರವಾಣಿ ಸಂದರ್ಶನದಲ್ಲಿ ಮಾತನಾಡಿರುವ ಅಬ್ದುಲ್ ಖಾದಿರ್ ಖಾನ್, ಕಲಾಂ ಅವರ ಹೆಸರು ಹೇಳಿದರೆ ಯಾವುದೇ ಅತ್ಯುನ್ನತ ಸಂಶೋಧನೆಗಳು ನೆನಪಿಗೆ ಬರುವುದಿಲ್ಲ ಎಂದು ಹೇಳಿದ್ದು ಖಾನ್ ಗೆ ಟ್ವಿಟ್ಟಿಗರು ಛೀಮಾರಿ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com