ಪತ್ತೆಯಾದ ಅವಶೇಷಗಳು (ಕೃಪೆ: ಟ್ವಿಟರ್/ @AircraftRetweet ಖಾತೆಯಿಂದ)
ವಿದೇಶ
ಹಿಂದೂ ಮಹಾಸಾಗರದಲ್ಲಿ ಸಿಕ್ಕಿದ ಅವಶೇಷಗಳು ಮಲೇಷ್ಯಾ ವಿಮಾನದ್ದು?
ಹಿಂದೂ ಮಹಾಸಾಗರದ ರಿಯೂನಿಯನ್ ಐಲ್ಯಾಂಡ್‌ನಲ್ಲಿ ಪತ್ತೆಯಾಗಿರುವ ವಿಮಾನದ ಅವಶೇಷಗಳು ನಾಪತ್ತೆಯಾಗಿದ್ದ ಮಲೇಷ್ಯಾ...
ಕೌಲಲಾಂಪುರ್: ಹಿಂದೂ ಮಹಾಸಾಗರದ ರಿಯೂನಿಯನ್ ಐಲ್ಯಾಂಡ್‌ನಲ್ಲಿ ಪತ್ತೆಯಾಗಿರುವ ವಿಮಾನದ ಅವಶೇಷಗಳು ನಾಪತ್ತೆಯಾಗಿದ್ದ ಮಲೇಷ್ಯಾ ವಿಮಾನದ್ದಾಗಿರಬಹುದೆಂದು ಶಂಕೆಯಿದೆ. ಎಂಎಚ್ 370 ಎಂಬ ಬೋಯಿಂಗ್ 777 ವಿಮಾನದ ಸಾಮ್ಯತೆಗಳಿರುವ ಅವಶೇಷಗಳು ಇಲ್ಲಿ ಪತ್ತೆಯಾಗಿದೆ.
ಬೋಯಿಂಗ್ 777ರಲ್ಲಿ ಕಂಡುಬರುವ ಫ್ಲಾಪರೋನ್ ಎಂಬ ಉಪಕರಣ ಈ ಅವಶೇಷಗಳಲ್ಲಿ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದಲೇ ಈ ಅವಶೇಷಗಳು ಎಂಎಚ್ 370ರದ್ದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.
ಪಶ್ಚಿಮ ಹಿಂದೂಮಹಾಸಾಗರದ ಮೆಡಗಾಸ್ಕರ್ ಬಳಿ ಫ್ರೆಂಚ್ ಅಧಿಕಾರದ ದ್ವೀಪಗಳಾದ ರೀಯೂನಿಯನ್ ದ್ವೀಪದಲ್ಲಿ ನಿನ್ನೆ ವಿಮಾನದ ಅವಶೇಷಗಳು ಪತ್ತೆಯಾಗಿತ್ತು. ಇಲ್ಲೀಗ ಫ್ರೆಂಚ್ ವಾಯುಸೇನೆಯ ಅಧಿಕಾರಿಗಳು ಪರಿಶೋಧನೆ ನಡೆಸುತ್ತಿದ್ದಾರೆ. ಒಂದು ವೇಳೆ ಇದು ಎಂಎಚ್ 370ರ ಅವಶೇಷವೆಂದು ಸಾಬೀತಾದರೆ ನಾಪತ್ತೆಯಾಗಿರುವ ವಿಮಾನದ ಬಗ್ಗೆ ಸಿಕ್ಕಿದ ಮೊದಲ ಸಾಕ್ಷಿ ಇದಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ