
ಜುಬಾ: ಇತ್ತೀಚೆಗಷ್ಟೇ ದಕ್ಷಿಣ ಸುಡಾನ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ 37 ಮಂದಿ ಸಾವನ್ನಪ್ಪಿದ್ದರೆ. ಅದೃಷ್ಟವಶಾತ್ 13 ತಿಂಗಳ ಮಗುವೊಂದು ಬದುಕುಳಿದು ಅಚ್ಚರಿ ಮೂಡಿಸಿದೆ.
ದಕ್ಷಿಣ ಸುಡಾನ್ ವಿಮಾನ ನಿಲ್ದಾಣದಿಂದ ಅಂಟೋನೋವ್-ಎಎನ್ 12 ಎಂಬ ಹೆಸರಿನ ಸರಕು ಸಾಗಣೆ ವಿಮಾನ ಟೇಆಫ್ ಆದ ಕೆಲ ಹೊತ್ತಿನಲ್ಲೆ ಪತನಗೊಂಡು 37 ಮಂದಿ ಸಾವನ್ನಪ್ಪಿದ್ದರು. ಆದರೆ, ಈ ಅಪಘಾತದಲ್ಲಿ 13 ತಿಂಗಳ ಮಗು ಮತ್ತು ಒಬ್ಬ ವ್ಯಕ್ತಿ ಮಾತ್ರವೇ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ.
ಸರಕು ವಿಮಾನದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ಇರಲಿಲ್ಲ. ಅದರೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗಿತ್ತು ಎಂದು ಸುಡಾನ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರದ ಮುಖ್ಯಸ್ಥರು ತಿಳಿಸಿದ್ದಾರೆ.
Advertisement