ವ್ಯಾಟಿಕನ್ ನಿಂದ ಹಿಂದೂಗಳಿಗೆ ದೀಪಾವಳಿ ಶುಭಾಶಯ ಸಂದೇಶ

ಕ್ರೈಸ್ತರ ಪ್ರಮುಖ ಧಾರ್ಮಿಕ ಸ್ಥಳ ವ್ಯಾಟಿಕನ್ ಸಿಟಿ ಹಿಂದೂಗಳಿಗೆ ದೀಪಾವಳಿ ಶುಭಾಶಯ ಕೋರಿದೆ.
ವ್ಯಾಟಿಕನ್ ಸಿಟಿ
ವ್ಯಾಟಿಕನ್ ಸಿಟಿ

ವ್ಯಾಟಿಕನ್ ಸಿಟಿ: ಕ್ರೈಸ್ತರ ಪ್ರಮುಖ ಧಾರ್ಮಿಕ ಸ್ಥಳ ವ್ಯಾಟಿಕನ್ ಸಿಟಿ ಹಿಂದೂಗಳಿಗೆ ದೀಪಾವಳಿ ಶುಭಾಶಯ ಕೋರಿದೆ.
ದೀಪಾವಳಿ ಆಚರಣೆ ಜಾಗತಿಕ ಮಟ್ಟದಲ್ಲಿ ಸಂತೋಷ ಮತ್ತು ಸಾಮರಸ್ಯವನ್ನುಂಟು ಮಾಡಲಿ ಎಂದು ವ್ಯಾಟಿಕನ್ ಸಿಟಿ ಸಂದೇಶ ಕಳಿಸಿದೆ. ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೆ ಹಿಂದೂ- ಕ್ರೈಸ್ತರು ಒಗ್ಗಟಿನಿಂದ ಕೆಲಸ ಮಾಡಬೇಕು, ಉಭಯ ಮತದ ಜನರು ಒಗ್ಗಟ್ಟಿನಿಂದಿದ್ದರೆ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ವ್ಯಾಟಿಕನ್ ಅಭಿಪ್ರಾಯಪಟ್ಟಿದೆ.
ಪರಿಸರದ ಬಗ್ಗೆ ಪೋಪ್ ನ ಇತ್ತೀಚಿನ ಹೇಳಿಕೆಯನ್ನು ದೀಪಾವಳಿ ಸಂದೇಶದಲ್ಲಿ ಉಲ್ಲೇಖಿಸಿರುವ ವ್ಯಾಟಿಕನ್,  ಪ್ರಕೃತಿಯನ್ನು ರಕ್ಷಿಸಲು, ಬಡವರನ್ನು ರಕ್ಷಿಸಲು, ಗೌರವ ಮತ್ತು ಸೋದರತ್ವವನ್ನು ಉಳಿಸಲು ನಾವೆಲ್ಲರೂ ಬದ್ಧವಾಗಿರಬೇಕು ಹಿಂದುಗಳು ಹಾಗೂ ಕ್ರೈಸ್ತರು, ಮಾನವ ಪರಿಸರವನ್ನು ಉಳಿಸುವ ಸಂಸ್ಕೃತಿಯನ್ನು ಆದರಿಸಬೇಕು ಎಂದು ವ್ಯಾಟಿನಕ್ ಸಂದೇಶ ಕರೆ ನೀಡಿದೆ.
ತರೌನ್  ವ್ಯಾಟಿಕನ್ ನ ಅಂತರ ಧಾರ್ಮಿಕ ವಿಭಾಗದ ಪಾಂಟಿಫಿಕಲ್ ಕೌನ್ಸಿಲ್ ನ ಅಧ್ಯಕ್ಷರಾಗಿದ್ದು ಹಿಂದೂಗಳಿಗೆ ಶುಭಾಶಯ ಸಂದೇಶ ಕಳಿಸಿದ್ದಾರೆ.ನವೆಂಬರ್ 11 ರಿಂದ ದೀಪಾವಳಿ ಹಬ್ಬದ ಆಚರಣೆ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com