ಕೊಹಿನೂರ್‌ ವಜ್ರಕ್ಕಾಗಿ ಬ್ರಿಟನ್‌ ರಾಣಿ ವಿರುದ್ಧ ಮೊಕದ್ದಮೆ ಹೂಡಲು ನಿರ್ಧಾರ

ಇತಿಹಾಸ ಪ್ರಸಿದ್ಧ ಕೊಹಿನೂರ್‌ ವಜ್ರವನ್ನು ವಾಪಸ್ ಪಡೆಯುವುದಕ್ಕಾಗಿ ಬ್ರಿಟನ್‌ ರಾಣಿಯ ವಿರುದ್ಧ ದಾವೆ ಹೂಡಲು ಭಾರತೀಯರು ನಿರ್ಧರಿಸಿದ್ದಾರೆ...
ಕೊಹಿನೂರ್ ವಜ್ರ
ಕೊಹಿನೂರ್ ವಜ್ರ

ಲಂಡನ್‌:  ಭಾರತದಿಂದ ಅಪಹರಿಸಲ್ಪಟ್ಟು ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ  ಬ್ರಿಟನ್‌ ರಾಣಿಯ ಕಿರೀಟವನ್ನು ಅಲಂಕರಿಸಿದ 105 ಕ್ಯಾರೆಟ್‌ಗಳ ವಿಶ್ವದ ಅತೀ ದೊಡ್ಡ ಗಾತ್ರದ, 10 ಕೋಟಿ ಪೌಂಡ್‌ ಮೌಲ್ಯದ, ಇತಿಹಾಸ ಪ್ರಸಿದ್ಧ ಕೊಹಿನೂರ್‌ ವಜ್ರವನ್ನು ವಾಪಸ್ ಪಡೆಯುವುದಕ್ಕಾಗಿ  ಬ್ರಿಟನ್‌ ರಾಣಿಯ ವಿರುದ್ಧ ದಾವೆ ಹೂಡಲು ಭಾರತೀಯರು ನಿರ್ಧರಿಸಿದ್ದಾರೆ.

ಕೊಹಿನೂರ್‌ ವಜ್ರವನ್ನು 1937ರಲ್ಲಿ ಆರನೇ ಜಾರ್ಜ್‌ ದೊರೆಯ ಪಟ್ಟಾಭಿಷೇಕದ ಸಂದರ್ಭದಲ್ಲಿ ಬ್ರಿಟನ್‌ ರಾಣಿ ಮಾತೆಯು ತನ್ನ ಕಿರೀಟದಲ್ಲಿ ಧರಿಸಿಕೊಂಡಿದ್ದರು. ಕೊಹಿನೂರ್‌ ವಜ್ರವು ಭಾರತದಿಂದ ಅಪಹರಿಸಲ್ಪಟ್ಟ ಕೊಹಿನೂರ್‌ ವಜ್ರವನ್ನು ಭಾರತಕ್ಕೆ ಮರಳಿ ತರುವ ಪ್ರಯತ್ನದಲ್ಲಿ ಕೈಜೋಡಿಸಿರುವ ಬಾಲಿವುಡ್‌ ಕಲಾವಿದರು ಮತ್ತು ಉದ್ಯಮಿಗಳು ಇದೀಗ ಲಂಡನ್‌ ಹೈಕೋರ್ಟ್‌ನಲ್ಲಿ ಕಾನೂನು ಪ್ರಕ್ರಿಯೆಯನ್ನು ಆರಂಭಿಸುವುದಕ್ಕಾಗಿ ನುರಿತ ವಕೀಲರೊಡನೆ ಸಮಾಲೋಚನೆ ನಡೆಸುತ್ತಿದ್ದಾರೆ.

ಬ್ರಿಟಿಷರು ಪಂಜಾಬನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಸಂದರ್ಭದಲ್ಲಿ ಸಿಕ್ಖರ ಕೊನೆಯ ದೊರೆ ದುಲೀಪ್‌ ಸಿಂಗ್‌ ಅಂದಿನ ವಿಕ್ಟೋರಿಯನ್‌ ರಾಣಿಗೆ ಕೊಹಿನೂರ್‌ ವಜ್ರವನ್ನು ಉಡುಗೊರೆಯಾಗಿ ಕೊಟ್ಟಿದ್ದರೆಂದು ಇತಿಹಾಸ ಹೇಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com