ಟರ್ಕಿ ಸಮುದ್ರದಲ್ಲಿ ಹಡಗು ಮುಳುಗಿ ೧೪ ನಿರಾಶ್ರಿತರ ಸಾವು

ರೀಕ್ ದ್ವೀಪ ಲೆಸ್ಬೋಸ್ ಗೆ ಹೊರಟಿದ್ದ ನಿರಾಶ್ರಿತರ ಹಡಗೊಂದು ಮುಳುಗಿ ೧೪ ಜನ ಮೃತಪಟ್ಟಿದ್ದು, ೨೭ ಜನರನ್ನು ಟರ್ಕಿ ಅಧಿಕಾರಿಗಳು ರಕ್ಷಿಸಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗ್ರೀಕ್ ದ್ವೀಪ ಲೆಸ್ಬೋಸ್ ಗೆ ಹೊರಟಿದ್ದ ನಿರಾಶ್ರಿತರ ಹಡಗೊಂದು ಮುಳುಗಿ ೧೪ ಜನ ಮೃತಪಟ್ಟಿದ್ದು, ೨೭ ಜನರನ್ನು ಟರ್ಕಿ ಅಧಿಕಾರಿಗಳು ರಕ್ಷಿಸಿದ್ದಾರೆ ಎಂದು ದಾಗನ್ ನ್ಯೂಸ್ ಏಜೆನ್ಸಿ ಬುಧವಾರ ವರದಿ ಮಾಡಿದೆ.

ಸಿರಿಯಾ, ಇರಾಕ್ ಮತ್ತು ಹಲವು ಆಫ್ರಿಕಾ ದೇಶಗಳಿಂದ ಅಸಂಖ್ಯಾತ ನಿರಾಶ್ರಿತರು ಟರ್ಕಿ ದೇಶದಿಂದ ಯೂರೋಪಿಗೆ ಗ್ರೀಕ್ ದ್ವೀಪ ಮಾರ್ಗವಾಗಿ ಕಳೆದ ಕೆಲವು ತಿಂಗಳುಗಳಿಂದ ತೆರಳುತ್ತಿದ್ದಾರೆ.

ಟರ್ಕಿಯ ಸಮುದ್ರದಿಂದ ಹೊರಟಿದ್ದ ಹಡಗು ೫ ಮೈಲಿ ಚಲಿಸಿದ ನಂತರ ವೈಪರೀತ್ಯ ಹವಾಮಾನದಿಂದ ಮುಳುಗಿತು ಎಂದು ತಿಳಿದುಬಂದಿದ್ದು ಮೃತಪಟ್ಟವರಲ್ಲಿ ಮಕ್ಕಳೂ ಸೇರಿದ್ದಾರೆ ಎಂದು ವರದಿ ತಿಳಿಸಿದೆ.

ಟರ್ಕಿಯಲ್ಲಿ ನಿರಾಶ್ರಿತರ ವಿಷಯ ಚರ್ಚಿಸಲು ಯೂರೋಪಿಯನ್ ಯೂನಿಯನ್ ಭಾನುವಾರ ಮತ್ತೆ ಸಭೆ ಸೇರಲಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com