ಭಾರತ-ಬ್ರಿಟನ್ ಸಂಬಂಧವನ್ನು ಉದ್ಯಮ ವಲಯ ಮುಂದುವರೆಸಬೇಕು: ಪ್ರಧಾನಿ

ಭಾರತ ಮತ್ತು ಬ್ರಿಟನ್ ದ್ವೀಪಕ್ಷೀಯ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವ ಇಚ್ಛಾಶಕ್ತಿ ಹೊಂದಿದ್ದು, ಈಗ ಉಭಯ ದೇಶಗಳ...
ಸಿಇಒ ಸಭೆಯಲ್ಲಿ ಮೋದಿ
ಸಿಇಒ ಸಭೆಯಲ್ಲಿ ಮೋದಿ

ಲಂಡನ್: ಭಾರತ ಮತ್ತು ಬ್ರಿಟನ್ ದ್ವೀಪಕ್ಷೀಯ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವ ಇಚ್ಛಾಶಕ್ತಿ ಹೊಂದಿದ್ದು, ಈಗ ಉಭಯ ದೇಶಗಳ ಉದ್ಯಮ ವಲಯ ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಇಂದು ಭಾರತ-ಬ್ರಿಟನ್ ಸಿಇಒಗಳ ಶೃಂಗ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ಭಾರತ ಮತ್ತು ಬ್ರಿಟಿನ್ ಆರ್ಥಿಕವಾಗಿ ಬೇರೆಯವರಿಗೆ ಮಾದರಿಯಾಗಿವೆ. ಈ ಸಂಬಂಧವನ್ನು ಖಾಸಗಿ ಕಂಪನಿಗಳ ಸಿಇಒಗಳಿಗೂ ವಿಸ್ತರಿಸಬೇಕು ಎಂದರು.

ಈ ವೇಳೆ ಮಾತನಾಡಿದ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

'ನಾವು ಇಬ್ಬರೂ ನಮ್ಮ ಆರ್ಥಿಕ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವ ರಾಜಕೀಯ ಇಚ್ಛಾಶಕ್ತಿ ಇದೆ' ಎಂದು ಕೆಮರೂನ್ ಹೇಳಿದರು.

ಮೂರು ದಿನಗಳ ಬ್ರಿಟನ್ ಪ್ರವಾಸದಲ್ಲಿರುವ ಮೋದಿ ಅವರು ಈಗಾಗಲೇ,  ನಾಗರಿಕ ಪರಮಾಣು ಒಪ್ಪಂದ, ಮಿಲಿಟರಿ ತಂತ್ರಜ್ಞಾನದಲ್ಲಿ ಸಹಭಾಗಿತ್ವ ಮತ್ತು ಸೈಬರ್ ಭದ್ರತೆ ಕುರಿತಂತೆ ವಿವಿಧ ಕ್ಷೇತ್ರಗಳಲ್ಲಿ ಒಟ್ಟು  9 ಬಿಲಿಯನ್ ಪೌಂಡ್ಸ್ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com