ಸಿರಿಯನ್ ನಿರಾಶ್ರಿತರು
ಸಿರಿಯನ್ ನಿರಾಶ್ರಿತರು

ಫ್ರಾನ್ಸ್ ನಲ್ಲಿ ಉಗ್ರರ ದಾಳಿ: ಸಂಕಷ್ಟಕ್ಕೆ ಸಿಲುಕಿದ ಸಿರಿಯನ್ ನಿರಾಶ್ರಿತರು

ಪ್ಯಾರಿಸಿನ ಮೇಲಿನ ಉಗ್ರರ ದಾಳಿಯಿಂದಾಗಿ ಯುರೋಪ್ ಪ್ರವೇಶಿಸುತ್ತಿರುವ ಸಿರಿಯನ್ ನಿರಾಶ್ರಿತರ...
ಪ್ಯಾರಿಸ್: ಪ್ಯಾರಿಸಿನ ಮೇಲಿನ ಉಗ್ರರ ದಾಳಿಯಿಂದಾಗಿ ಯುರೋಪ್ ಪ್ರವೇಶಿಸುತ್ತಿರುವ ಸಿರಿಯನ್ ನಿರಾಶ್ರಿತರ ಮೇಲೆ ದುಷ್ಪರಿಣಾಮ ಬೀರಿದೆ.
ಸ್ಟೆಡ್ ಡಿ ಫ್ರಾನ್ಸ್ ಸ್ಟೇಡಿಯಂನ ಸಮೀಪ ಸ್ಫೋಟ ನಡೆದ ಸ್ಥಳದಲ್ಲಿ ಸಿರಿಯನ್ ಮೂಲದ ವ್ಯಕ್ತಿಯ ಪಾಸ್ ಪೋರ್ಟ್ ಲಭಿಸಿದೆ. ಈ ಹಿನ್ನಲೆಯಲ್ಲಿ ದಾಳಿಯ ಹಿಂದೆ ನಿರಾಶ್ರಿತರ ಮುಖವಾಡ ಧರಿಸಿ ಯುರೋಪ್ ಪ್ರವೇಶಿಸಿದವರ ಕೈವಾಡ ವಿರಬಹುದೆಂದು ಅಧಿಕಾರಿಗಳು ಸಂಶಯಿಸಿದ್ದಾರೆ. 
ಈ ಸಂಬಂಧ ತನಿಖೆ ಕೈಗೊಂಡಿರುವ ಫ್ರಾನ್ಸ್ ತನಿಖ ಅಧಿಕಾರಿಗಳು, ಗ್ರೀಕ್ ನಲ್ಲಿ ನೆಲೆಸಿರುವ ಸಿರಿಯನ್ ನಿರಾಶ್ರಿತರ ಬೆರಳಚ್ಚು ಪರೀಕ್ಷೆಯನ್ನು ಬಂಧಿತರ ಜೊತೆ ಹೋಲಿಸಿ ನೋಡುವ ಕುರಿತು ಚಿಂತನೆ ನಡೆಸುತ್ತಿದ್ದಾರೆ. 1990ರಲ್ಲಿ ಹುಟ್ಟಿದ ವ್ಯಕ್ತಿಯೊಬ್ಬನ ಪಾಸ್ ಪೋರ್ಟ್ ಇದೆಂದು ಹೇಳಲಾಗಿದ್ದು, ನಿರಾಶ್ರಿತರಾಗಿ ಗ್ರೀಕ್ ತಲುಪಿದ ಸಿರಿಯನ್ ಪ್ರಜೆಯ ಪಾಸ್ ಪೋರ್ಟ್ ಇದೆಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಭಚೋತ್ಪಾದಕರ ದಾಳಿಗೆ ಫ್ರೆಂಚ್ ಸರ್ಕಾರವೂ ಹೊಣೆ ಎಂದು ಸಿರಿಯನ್  ಅಧ್ಯಕ್ಷ ಬಸರುಲ್ ಅಸದ್ ಹೇಳಿದ್ದಾರೆ. ಸಿರಿಯಾದಲ್ಲಿ ಬಂಡುಕೋರರಿಗೆ ನೆರವಾಗುತ್ತಿರುವ ಫ್ರೆಂಚ್ ಸರ್ಕಾರಕ್ಕೆ ಇದೊಂದು ಪಾಠವಾಗಲಿದೆ ಎಂದು ಅಸದ್ ಹೇಳಿದ್ದಾರೆ.
ಈ ಮಧ್ಯೆ ಯೂರೋಪ್ ಪ್ರವೇಶಿಸುತ್ತಿರುವ ಸಿರಿಯನ್ ನಿರಾಶ್ರಿತರು ಮುಖ್ಯವಲ್ಲ. ನಿರಾಶ್ರಿತರಿಗೆ ಸಂಬಂಧಿಸಿದಂತೆ ಕಠಿಣ ನಿಲುವ ತೆಗೆದುಕೊಳ್ಳಬೇಕು ಎಂದು ಸದಸ್ಯ ರಾಷ್ಟ್ರಗಳು ಯೂರೋಪ್ ಒಕ್ಕೂಟವನ್ನು ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ.

Related Stories

No stories found.

Advertisement

X
Kannada Prabha
www.kannadaprabha.com